ಬೈಂದೂರು; ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಹೆಸರಿನಲ್ಲಿ ರಾಜಸ್ಥಾನ ಮೂಲದ ನಾಸಿರ್ ಹುಸೇನ್ ಎಂಬಾತ ನಕಲಿ ವೆಬ್ಸೈಟ್ ತೆರೆದು ವಂಚನೆ ಎಸಗುತ್ತಿದ್ದ. ಭಕ್ತರಿಂದ ಮುಂಗಡ ರೂಮ್ ಬುಕಿಂಗ್ ಮಾಡಿಸಿಕೊಳ್ಳಲಾಗುತ್ತಿತ್ತು. ಸ್ಕ್ಯಾನರ್ ಮೂಲಕ ಹಣ ಪಡೆದು ನಕಲಿ ರಶೀದಿ ನೀಡುತ್ತಿದ್ದ. ಇದೀಗ ಆರೋಪಿಯನ್ನು ಕೊಲ್ಲೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.