
ಉಡುಪಿ. ಜ.22 :- ಉಡುಪಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಮಹಿಳೆಯೊಬ್ಬರು ಉಳಿಯಲು ಅವಕಾಶ ಮಾಡಿಕೊಡಿ ಎಂದು ವಿನಂತಿಸುತ್ತಾ, ದುಃಖಿಸುತ್ತಿದ್ದ ಮಹಿಳೆಯನ್ನು ವಿಶುಶೆಟ್ಟಿಯವರು ರಕ್ಷಿಸಿ ಸಖಿ ಸೆಂಟರಿಗೆ ದಾಖಲಿಸಿದ್ದಾರೆ.
ಮಹಿಳೆ ಮೂಲತಃ ಭಟ್ಕಳದ ಜಯಂತಿ(40ವರ್ಷ) ಕೌಟುಂಬಿಕ ಕಲಹದಿಂದ ಹೆದರಿ ಮನೆಬಿಟ್ಟು ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಹಿಳಾ ಠಾಣೆಗೆ ಮಾಹಿತಿ ನೀಡಲಾಗಿದೆ. ಸಂಬಂಧಪಟ್ಟವರು ಸಖಿ ಸೆಂಟರ್ ಸಂಪರ್ಕಿಸುವಂತೆ ವಿಶುಶೆಟ್ಟಿಯವರು ವಿನಂತಿಸಿದ್ದಾರೆ.