Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಕ್ಯಾನ್ಸ‌ರ್ ರೋಗಿಗೆ ಸಿಗದ ಸಂಬಂಧಿಕರ ಸ್ಪಂದನೆ; ಆಶ್ರಯ ನೀಡಿದ ಗೊರಟಿ ಆಸ್ಪತ್ರೆಯ ಕ್ಯಾನ್ಸ‌ರ್ ಸಲಹಾ ಕೇಂದ್ರ.;ವಿಶು ಶೆಟ್ಟಿ

ಉಡುಪಿ: ಜ.25, ತಿಂಗಳ ಹಿಂದೆ ಮುಖದಲ್ಲಿ * ಹುಣ್ಣಾಗಿ ಹುಳಗಳಿಂದ ಕೂಡಿದ ಕ್ಯಾನ್ಸ‌ರ್ ರೋಗಿಯನ್ನು ವಿಶು ಶೆಟ್ಟಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಇದೀಗ ಆಸ್ಪತ್ರೆಯಿಂದ ಬಿಡುಗಡೆಗೊಂಡ ರೋಗಿಗೆ ಸಂಬಂಧಿಕರ ಸ್ಪಂದನೆ ಸಿಗದಿರುವುದರಿಂದ ವಿಶು ಶೆಟ್ಟಿ ರೋಗಿಯನ್ನು ಕಲ್ಯಾಣ್‌ ಪುರದ ಕ್ಯಾನ್ಸರ್ ಸಲಹಾ ಕೇಂದ್ರ,
ಗೊರಟಿ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ರೋಗಿ ವಾಸುದೇವ ಗೌಡ (55) ಸುಳ್ಯ ಮೂಲದವರು ಸಂಬಂಧಿಕರ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿಯೂ ಪತ್ತೆಯಾಗಲಿಲ್ಲ. ರೋಗಿಗೆ ಕ್ಯಾನ್ಸ‌ರ್ ರೋಗ ಉಲ್ಬಣಗೊಂಡು ಮುಖ ಹುಣ್ಣಾಗಿ ತೀವ್ರ ಉಲ್ಬಣಗೊಂಡಿತ್ತು . ಆಸ್ಪತ್ರೆಯಿಂದ ಬಿಡುಗಡೆಗೊಂಡ ರೋಗಿಗೆ ಪುನರ್ವಸತಿ ಹಾಗೂ ಹಾಗೂ ಆಪ್ತ ಸಲಹಾ ಕೇಂದ್ರಕ್ಕಾಗಿ ವಿಶು ಶೆಟ್ಟಿ ಗೊರಟಿ ಆಸ್ಪತ್ರೆಯ ಮುಖ್ಯಸ್ಥರಲ್ಲಿ ವಿನಂತಿಸಿದ್ದು, ಅನುಮತಿ ನೀಡಿದ್ದು ದಾಖಲಿಸಿದ್ದಾರೆ.
ಇಂತಹ ಅಸಹಾಯಕ ವ್ಯಕ್ತಿಗೆ ಆಶ್ರಯ ನೀಡಿದ ಗೊರಟಿ ಆಸ್ಪತ್ರೆಯ ಆಡಳಿತ ಮಂಡಳಿಗೆ ವಿಶು ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ. ದಾಖಲು ಪ್ರಕ್ರಿಯೆ * ಹಾಗೂ ದಾಖಲಾತಿಗೆ ಆಸ್ಪತ್ರೆಯ ಸಿಬ್ಬಂದಿ ರಾಬಿನ್ ಕೆ ಜೋಸೆಫ್ ಸಹಕರಿಸಿದ್ದಾರೆ.

About The Author

Leave a Reply

Your email address will not be published. Required fields are marked *