

ರೋಗಿ ವಾಸುದೇವ ಗೌಡ (55) ಸುಳ್ಯ ಮೂಲದವರು ಸಂಬಂಧಿಕರ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿಯೂ ಪತ್ತೆಯಾಗಲಿಲ್ಲ. ರೋಗಿಗೆ ಕ್ಯಾನ್ಸರ್ ರೋಗ ಉಲ್ಬಣಗೊಂಡು ಮುಖ ಹುಣ್ಣಾಗಿ ತೀವ್ರ ಉಲ್ಬಣಗೊಂಡಿತ್ತು . ಆಸ್ಪತ್ರೆಯಿಂದ ಬಿಡುಗಡೆಗೊಂಡ ರೋಗಿಗೆ ಪುನರ್ವಸತಿ ಹಾಗೂ ಹಾಗೂ ಆಪ್ತ ಸಲಹಾ ಕೇಂದ್ರಕ್ಕಾಗಿ ವಿಶು ಶೆಟ್ಟಿ ಗೊರಟಿ ಆಸ್ಪತ್ರೆಯ ಮುಖ್ಯಸ್ಥರಲ್ಲಿ ವಿನಂತಿಸಿದ್ದು, ಅನುಮತಿ ನೀಡಿದ್ದು ದಾಖಲಿಸಿದ್ದಾರೆ.
ಇಂತಹ ಅಸಹಾಯಕ ವ್ಯಕ್ತಿಗೆ ಆಶ್ರಯ ನೀಡಿದ ಗೊರಟಿ ಆಸ್ಪತ್ರೆಯ ಆಡಳಿತ ಮಂಡಳಿಗೆ ವಿಶು ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ. ದಾಖಲು ಪ್ರಕ್ರಿಯೆ * ಹಾಗೂ ದಾಖಲಾತಿಗೆ ಆಸ್ಪತ್ರೆಯ ಸಿಬ್ಬಂದಿ ರಾಬಿನ್ ಕೆ ಜೋಸೆಫ್ ಸಹಕರಿಸಿದ್ದಾರೆ.