ಬೆಂಗಳೂರು ಮೀನುಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ

ಕರ್ನಾಟಕ ರಾಜ್ಯ ಸಾಂಪ್ರದಾಯಿಕ ಮೀನುಗಾರರ ಒಕ್ಕೂಟ ಉಪ್ಪುಂದ. ಇದರ ವತಿಯಿಂದ ಹಲವು ದಿನಗಳ ಹಿಂದೆ ಯಾಂತ್ರಿಕೃತ ಬೋಟ್ ನವರು ಸಮುದ್ರ ತೀರ ಪ್ರದೇಶದಲ್ಲಿ ಬುಲ್ ಟ್ರಾಲ್ ಮಾಡುತ್ತಿರುವ ಬಗ್ಗೆ ಮಾನ್ಯ ಮೀನುಗಾರಿಕಾ ಸಚಿವರ ಗಮನಕ್ಕೆ ತಂದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದು,
ಇದರ ಪರಿಣಾಮವಾಗಿ ಮಾನ್ಯ ಮೀನುಗಾರಿಕಾ ಸಚಿವರು ದಿನಾಂಕ 25.09.2024 ರಂದು ಮೀನುಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಮತ್ತು ಕರಾವಳಿ ಕಾವಲು ಪಡೆಯ ಹಿರಿಯ ಅಧಿಕಾರಿಗಳನ್ನು ಬೆಂಗಳೂರು ವಿಧಾನಸೌಧ ಅವರ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ಕರೆದು, ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರಿಂದ ಮೀನು ಮರಿ ಸಂತತಿ ನಾಶವಾಗುವಂತಹ ಅವೈಜ್ಞಾನಿಕ ಮೀನುಗಾರಿಕೆಯಾದ ಬುಲ್ ಟ್ರಾಲ್ ಮೀನುಗಾರಿಕೆ ಮತ್ತು ಬೆಳಕು ಮೀನುಗಾರಿಕೆಯ
ಬಗ್ಗೆ ಈಗಾಗಲೇ ನಿಷೇಧದ ಆದೇಶವಿದ್ದು ಅದನ್ನು ಕೂಡಲೇ ಕಟ್ಟುನಿಟ್ಟಾಗಿ ಕರಾವಳಿ ಕಾವಲು ಪಡೆ ಅಧಿಕಾರಿಗಳು ಮತ್ತು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಬೆಂಗಳೂರಿಗೆ

ಆಗಮಿಸಿದ ನಿಯೋಗದಲ್ಲಿ ಕರ್ನಾಟಕ ರಾಜ್ಯ ಸಾಂಪ್ರದಾಯಿಕ ಮೀನುಗಾರರ ಒಕ್ಕೂಟ ಉಪ್ಪುಂದ ಇದರ ಅಧ್ಯಕ್ಷರಾದ ನಾಗೇಶ ಕಾರ್ವಿ ಪ್ರಧಾನ ಕಾರ್ಯದರ್ಶಿಯಾದ ಯಶವಂತ ಗಂಗೊಳ್ಳಿ, ಗೌರವಸಲಹೆಗಾರರಾದ ಎಸ್ ಮದನ್ ಕುಮಾರ ಉಪ್ಪುಂದ ನವೀನ್ ಚಂದ್ರ ಉಪ್ಪುಂದ, ಚಂದ್ರಶೇಖರ ಶ್ರೀಯಾನ ಮಂಗಳೂರು, ಸುಧೀರ ಶ್ರೀಯಾನ ಮಂಗಳೂರು,ಮಂಜುನಾಥ.ಜಿ.ಖಾರ್ವಿ ಉಪ್ಪುಂದ, ಕೃಷ್ಣ ಮುಡೇಶ್ವರ, ಒಕ್ಕೂಟದ ಸದಸ್ಯರಾದ ವೆಂಕಟರಮಣ ಕಾರ್ವಿ ಉಪ್ಪುಂದ, ಸುರೇಶ ಕಾರ್ವಿ ಮರವಂತೆ, ಚಂದ್ರ ಡಿ.ಕಾರ್ವಿ ಕೊಡೇರಿ, ನಾಗರಾಜ ಹರಿಕಾಂತ ಕುಮಟ, ತಿಮ್ಮಪ್ಪ ಕಾರ್ವಿ ಉಪ್ಪುಂದ, ವಾಸುದೇವ

ಕಾರ್ವಿ ಮರವಂತೆ, ಮಹೇಶ ಖಾರ್ವಿ ನಾವುಂದ ಪ್ರವೀಣ ಹರಿಕಾಂತ ಕುಮಟ.

ವರದಿ ;ಜನಾರ್ದನ ಕೆ ಎಂ ಮರವಂತೆ

About Janardhana K M

Check Also

ಹೆಣ್ಣು ಮಕ್ಕಳಿಂದ ಬೀದಿ ಭಜನೆ: ಪ್ರತಿಭಾ ಕುಳಾಯಿಗೆ ತೀಕ್ಷವಾಗಿ ಪ್ರತಿಕ್ರೀಯಿಸಿದ ಶಾಸಕ ಡಾ. ಭರತ್ ಶೆಟ್ಟಿ ಮಂಗಳೂರು : ಬಿಲ್ಲವ …

Leave a Reply

Your email address will not be published. Required fields are marked *