ಸರಕಾರಿ ಬಸ್ಸಿನಿಂದ ಇಳಿಯುವಾಗ ಆಯತಪ್ಪಿ ಬಿದ್ದ ಮಹಿಳೆ : ಜಿಲ್ಲಾ ಆಸ್ಪತ್ರೆಗೆ ಅದೇ ಬಸ್ಸಿನಲ್ಲಿ ದಾಖಲಿಸಿದ ವಿಶು ಶೆಟ್ಟಿ
ಉಡುಪಿ : ಪುತ್ತೂರು ಬಳಿ ಸರಕಾರಿ ಬಸ್ ನಿಂದ ಕೆಳಗಿಳಿಯುವ ಸಂದರ್ಭದಲ್ಲಿ ಪ್ರಯಾಣಿಕ ಮಹಿಳೆಯೋರ್ವರು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ನಡೆದಿದ್ದು. ವಿಷಯ ತಿಳಿದ ಸಮಾಜ ಸೇವಕ ವಿಶು ಶೆಟ್ಟಿ ಅವರು ಗಾಯಾಳು ಮಹಿಳೆಯನ್ನು ಅದೇ ಬಸ್ನ ಮೂಲಕ ಕರೆ ತಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ಸೋಮವಾರ ನಡೆದಿದೆ . ಮಹಿಳೆಯನ್ನು ಉಡುಪಿ ಹನುಮಂತ ನಗರದ ನಿವಾಸಿ ಶಾಂತಾ (55,) ಎಂದು ಗುರುತಿಸಲಾಗಿದೆ. ಮಹಿಳೆ ರಕ್ಷಣಾ ವೆಳೆಯಲ್ಲಿ ಸಮಯ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದು, ಆಕೆಯ ಬಲತೋಳಿನ ಮೂಳೆ ಸಂಪೂರ್ಣ ಮುರಿದಿರುತ್ತದೆ. ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ
ಪ್ರಕರಣದ ಬಗ್ಗೆ ಸಂಚಾರಿ ಠಾಣೆಗೆ ಹಾಗೂ ಮಹಿಳೆಯ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ.