ಹೈದರಾಬಾದ್ ಮನನೊಂದ ಯುವತಿಯ ರಕ್ಷಣೆ,  ಸಖಿ ಸೆಂಟರ್ ಗೆ ದಾಖಲಿಸಿದ ವಿಶು ಶೆಟ್ಟಿ

ಉಡುಪಿ ಎ.10 :- ಉಡುಪಿ ಕರಾವಳಿ ಬೈಪಾಸ್ ಬಳಿ ನನಗೆ ಯಾರೂ ತೊಂದರೆ ಕೊಡಬೇಡಿ ನನಗೆ ಹೆದರಿಕೆ ಆಗುತ್ತಿದೆ ಎಂದು ರೋದಿಸುತ್ತಿದ್ದ ಯುವತಿಯೊಬ್ಬಳನ್ನು ವಿಶುಶೆಟ್ಟಿಯವರು ರಕ್ಷಿಸಿ ಸಖಿ ಸೆಂಟರಿಗೆ ದಾಖಲಿಸಿದ್ದಾರೆ.
ಯುವತಿಯ ಹೆಸರು ಸೌಮ್ಯ (19 ವರ್ಷ) ಹೈದರಬಾದ್ ಮೂಲದವಳೆಂದು ಹೇಳಿದ್ದು, ಮೈಯೆಲ್ಲ ಕೊಳಕ್ಕಾಗಿದ್ದು ರಾತ್ರಿ ರಸ್ತೆ ಬದಿಯಲ್ಲಿಯೇ ಕಳೆದಿರುವ ಬಗ್ಗೆ ಮೆಲ್ನೋಟಕ್ಕೆ ತೋರಿರುತ್ತದೆ. ಯುವತಿಯು ತಾನು ಹೆದರಿ ಊರು ಬಿಟ್ಟು ಬಂದಿರುತ್ತೇನೆ ಎಂದು ದುಃಖಿಸುತ್ತ ಹೇಳುತ್ತಿದ್ದು, ರಕ್ಷಣಾ ಸಮಯದಲ್ಲಿ ಬಹಳಷ್ಟು ಹೆದರಿ ಬೊಬ್ಬಿಡುತ್ತಿದ್ದಳು. ಈ ಬಗ್ಗೆ ವಿಶುಶೆಟ್ಟಿಯವರು ಮಹಿಳಾ ಠಾಣೆಗೆ ಮಾಹಿತಿ ನೀಡಿರುತ್ತಾರೆ.
ಸಂಬಂಧಿಕರು ಯಾರಾದರು ಇದ್ದಲ್ಲಿ ಮಹಿಳಾ ಠಾಣೆ ಅಥವಾ ಸಖಿ ಸೆಂಟರ್ ರನ್ನು ಸಂಪರ್ಕಿಸುವಂತೆ ವಿಶುಶೆಟ್ಟಿಯವರು ವಿನಂತಿಸಿದ್ದಾರೆ.

About Janardhana K M

Check Also

ಮರವಂತೆ ಮೀನುಗಾರ ಸಹಕಾರಿ ಸಂಘದ 83ನೇ  ವರ್ಷದ ವಾರ್ಷಿಕ ಮಹಾಸಭೆ

ಬೈಂದೂರು ಮರವಂತೆ ಮೀನುಗಾರ ಸಹಕಾರಿ ಸಂಘ ರಿ ವಾರ್ಷಿಕ ಮಹಾಸಭೆ ಇಂದು ಸಹಕಾರಿ ಸಂಘದಲ್ಲಿ ನಡೆಯಿತು ಸಂಘ ಆರಂಭದಲ್ಲಿ ದೀಪ …

Leave a Reply

Your email address will not be published. Required fields are marked *