

ಅಲ್ಲದೇ ಮಾನ್ಯ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಸರಿಯಾಗಿ ಪಾಲಿಸಿರುವುದಿಲ್ಲ.

ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ V.A ಮತ್ತು R. I ಯವರಿಗೆ ಕಾನೂನು ಪಾಠ ಹೇಳಿ ಉದ್ಧಟತನದಿಂದ ಮೆರೆದ ಜೀವನ್ ಶೆಟ್ಟಿ ಎಂಬವನಿಗೆ ನಿನ್ನ ಮೇಲೆ ಸರಕಾರಿ ಅಧಿಕಾರಿಯವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಉಚ್ಚ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ್ದಕ್ಕೆ ಕೇಸು ದಾಖಲಿಸುತ್ತೇವೆ ಎಂದು ಹೇಳಿದಾಗ ನನ್ನ ಮರ್ಯಾದೆ ಪ್ರಶ್ನೆ ನಾನು ಸುಯಿಸೈಡ್ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಅಂಗಲಾಚ್ಚಿದಲ್ಲದೆ, ಹೈಕೋರ್ಟ್ ನ್ಯಾಯಾವಾದಿಗಳು ಸ್ಥಳ ಕ್ಕೆ ಯಾರೇ ಸರಕಾರಿ ಅಧಿಕಾರಿಗಳು ಬಂದರೆ ಅವರ ಫೋಟೋ ತೆಗೆದು ಕಳುಹಿಸಿ ಅವರಿಗೆ ತಕ್ಕ ಶಾಸ್ತಿ ಮಾಡುತ್ತಾರೆ ಹೇಳಿದರೆ ಎಂದು V. A ಮತ್ತು R. I ರವರಿಗೆ ಜೀವನ್ ಶೆಟ್ಟಿ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ.
ದಿನಾಂಕ : 07/08/2025 ರಂದು ಹೈಕೋರ್ಟ್ ಆದೇಶ ಉಲ್ಲಂಘನೆ ಕುರಿತು ನೀಡಿದ ನೋಟಿಸ್ನ ಪತ್ರಿ

ಇಲ್ಲಿ ಪಾಳೇಗಾರರ ಆಡಳಿತ ನಡೆಯುತ್ತಿದೆಯೇ? ಇದು ಬಿಹಾರೇ, ಹಣವಂತರಿಗೆ ಒಂದು ನ್ಯಾಯ ಬಡವರಿಗೆ
ಒಂದು ನ್ಯಾಯ, ಹೋರಾಟಗಾರರಿಗೆ ಸುಳ್ಳು ಕೇಸ್ ಹಾಕಿ 106 ಹಾಕಿ ತೊಂದರೆ ಕೊಟ್ಟಿದ್ದು ಸರಿಯೇ? ಉಚ್ಚ ನ್ಯಾಯಾಲಯ ಮತ್ತು ತಹಸಿಲ್ದಾರ ಆದೇಶ ಉಲ್ಲಂಘನೆ ಮಾಡಿದವರಿಗೆ ಯಾವುದೇ ಸೆಕ್ಷನ್ ಹಾಕದೆ ಇರುವುದು ವಿಪರ್ಯಾಸವೇ ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.