March 4, 2026

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ತಮ್ಮಯ್ಯ ದೇವಾಡಿಗ ರವರ ಮನವಿಯ ಮೇರೆಗೆ ಸ್ವರ್ಣ ಜ್ಯುವೆಲರಿ ಮಾಲೀಕರಾದ ದೀಪಕ್ ರಾಮದಾಸ್ ನಾಯಕ್ ರವರು ನಾಯಕವಾಡಿ, ಗುಜ್ಜಾಡಿ ಸರ್ಕಲ್ ನಲ್ಲಿ ರಸ್ತೆಗೆ ಅಳವಡಿಸಲು ಎಂಟು ಬ್ಯಾರಿಕೇಡ್‌ ಕೊಡುಗೆ ನೀಡಿದ್ದರು

ಹೌದು ಇತ್ತೀಚಿಗಷ್ಟೇ ರಸ್ತೆ ಸಂಪೂರ್ಣ ಅಭಿವೃದ್ಧಿಯಾಗಿ ಅಗಲೀಕರಣಗೊಂಡಿದ್ದು ವಾಹನಗಳ ವೇಗ ಮಿತಿ ಹೆಚ್ಚಾಗಿದ್ದು, ಸಾರ್ವಜನಿಕರ ಹಿತ ದೃಷ್ಟಿ ಹಾಗೂ ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಕಳೆದ 15 ದಿನಗಳ ಹಿಂದೆ ಗ್ರಾಮ ಪಂಚಾಯತ್ ಅಧ್ಯಕ್ಷ ತಮ್ಮಯ್ಯ ದೇವಾಡಿಗ ರವರು ರೋಹಿದಾಸ್‌ ನಾಯಕ್ ಗುಜ್ಜಾಡಿ ರವರ ಮುಕೇನ ಸ್ವರ್ಣ ಜ್ಯುವೆಲರಿ ಮಾಲೀಕರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ 22- 1- 2026 ಗುರುವಾರ ಎಂಟು ಬ್ಯಾರಿಕೇಡ್ ಕೊಡುಗೆ ನೀಡಿದ ಸಂದರ್ಭ ಗುರುವಾರ ಬೆಳಿಗ್ಗೆ ವೇಳೆಯಲ್ಲಿ ಸ್ವರ್ಣ ಜ್ಯುವೆಲರಿ ಮ್ಯಾನೇಜರ್ ಉದಯ್ ಕುಮಾರ್ ನಾಯಕ್ ರವರು ಆಗಮಿಸಿ ಗಂಗೊಳ್ಳಿ ಪೊಲೀಸ್‌ ಠಾಣಾಧಿಕಾರಿ ಪವನ್ ನಾಯಕ್ ರವರ ಮುಕೇನ ಗುಜ್ಜಡಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದರು, ಈ ಸಂದರ್ಭ ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ತಮ್ಮಯ್ಯ ದೇವಾಡಿಗ ರವರು ಸ್ವರ್ಣ ಜ್ಯುವೆಲರಿ ಮಾಲೀಕರಾದ ದೀಪಕ್ ರಾಮದಾಸ್ ನಾಯಕ್ ರವರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಅಭಿನಂದನೆ ತಿಳಿಸಿದರು ಮತ್ತು ಬ್ಯಾರಿಕೇಡ್ ಕೊಡುಗೆ ನೀಡಲು ಸಹಕರಿಸಿದ ರೋಹಿದಾಸ್ ನಾಯಕ್‌

ಗುಜ್ಜಾಡಿ ಯವರಿಗೂ ಅಭಿನಂದನೆ ಸಲ್ಲಿಸಿ, 8 ಬ್ಯಾರಿಕೇಡ್ ಗಂಗೊಳ್ಳಿ ಪೊಲೀಸ್‌ ಠಾಣಾಧಿಕಾರಿ ಪವನ್ ನಾಯಕ್ ರವರಿಗೆ ರಸ್ತೆಗೆ ಅಳವಡಿಸಲು ಹಸ್ತಾಂತರಿಸಿದರು,

ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಶೋಭಾ ರವರು ಸ್ವಾಗತ ಭಾಷಣ ವಾಚಿಸಿದರು, ಪಂಚಾಯತ್ ಕಾರ್ಯದರ್ಶಿ ಶಕುಂತಲಾ ಮಾಧವ ರವರು ಧನ್ಯವಾದ ವಂದಿಸಿದರು, ಪಂಚಾಯತ್‌ ಸಿಬ್ಬಂದಿ ರಾಜು ಪೂಜಾರಿ ಕೊಡಪಾಡಿ ಸಹಕರಿಸಿದರು

ಈ ಸಂದರ್ಭ ಗುಜ್ಜಾಡಿ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಮೇಸ್ತ, ರಾಜು ಪೂಜಾರಿ, ಸೀತಾರಾಮ್ ಗಾಣಿಗ, ಜನಾರ್ದನ ಪೂಜಾರಿ, ಲೋಲಾಕ್ಷಿ ಪಂಡಿತ್‌, ಜಯಂತಿ, ಭಾರತಿ, ಯಮುನ ಪೂಜಾರಿ, ಸೇರಿದಂತೆ ಊರಿನ ಮುಖಂಡರು ಹಾಗೂ ರಿಕ್ಷಾ ಚಾಲಕರು ಮತ್ತು ಸಾರ್ವಜನಿಕರು ಗಂಗೊಳ್ಳಿ ಪೊಲೀಸ್‌ ಠಾಣಾ ಸಿಬ್ಬಂದಿಗಳು, DAR ಸಿಬ್ಬಂದಿಗಳು

About The Author

Leave a Reply

Your email address will not be published. Required fields are marked *