ಉತ್ಸವಗಳು ಬದುಕಿನ ಬದಲಾವಣೆಗೆ ನಾಂದಿಯಾಗಲಿ: ಡಾ.ಡಿ.ವೀರೇಂದ್ರ ಹೆಗ್ಡೆ
ಬೈಂದೂರು; ಬೈಂದೂರು ಜನರು ಈ ಕ್ಷೇತ್ರದ ಮೇಲೆ ಇಟ್ಟಿರುವ ನಂಬಿಕೆ ನಮಗೆ ಖುಷಿ ಕಾಯಕವಾಗಿದೆ, ಕಲೆ,ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಬೈಂದೂರು ಬಹಳ ಹಿಂದಿನಿಂದಲೂ ಪ್ರಸಿದ್ದಿ ಪಡೆದಿದೆ.ಹತ್ತಾರು ಪೌರಾಣಿಕ ಹಿನ್ನೆಲೆಯುಳ್ಳ ಧಾರ್ಮಿಕ ಸ್ಥಳಗಳು ಬೈಂದೂರಿನಲ್ಲಿದೆ.ಶ್ರೀ ಕ್ಷೇತ್ರದ ವತಿಯಿಂದ ಇವುಗಳ ಅಭಿವೃದ್ಧಿಗೆ ನಿರಂತರ ಸಹಾಯ ನೀಡಲಾಗಿದೆ.ಪ್ರತಿಯೊಬ್ಬರು ಧರ್ಮದ ಹಾದಿಯಲ್ಲಿ ಬದುಕು ಸಾಗಿಸಿ ಧಾರ್ಮಿಕತೆಯನ್ನು ಉಳಿಸಿಕೊಳ್ಳಬೇಕು.ಉತ್ಸವಗಳು ಬದುಕಿನ ಬದಲಾವಣೆಗೆ ನಾಂದಿಯಾಗಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಡೆ ಹೇಳಿದರು, ಬೈಂದೂರಿನ ಶಾಸಕರಾದ ಗುರುರಾಜ ಗಂಟಿಹೊಳೆ ಅವರ ಮಾತನ್ನಾಡಿ ಈ ಉತ್ಸವ ಮಾಡುವ ಮೊದಲು ಗ್ರಾಮ ಉತ್ಸವ ಮಾಡುವ ಪರಿಕಲ್ಪನೆಯ ವತಿಯಿಂದ ಸ್ವಲ್ಪ ಏರುಪೇರು ಆದರು ಬೈಂದೂರು ಉತ್ಸವ ಬಾರಿ ವಿಜ್ರಂಭಣೆಯಿಂದ ಪ್ರತಿ ಗ್ರಾಮದ ಸದಸ್ಯರು ಮತ್ತು ಸಂಘಟನೆಗಳು ಸಂಜೀವಿನಿ ಸಂಘದ ಸದಸ್ಯರು, ಮತ್ತು ಇತರ ಸದಸ್ಯರು ಹಿರಿಯ ವ್ಯಕ್ತಿಗಳ ಮಾರ್ಗದರ್ಶನದಂತೆ ಈ ಮೂರು ದಿನಗಳ ಕಾಲ ನಡೆಯಲಿರುವ ಬೈಂದೂರು ಉತ್ಸವ -2026 ಉದ್ಘಾಟಿಸಿ ಈ ಮಾತುಗಳನ್ನಾಡಿದರು. ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಹಿಂಗಾರ ಅರಳಿಸಿ ಮಾತನಾಡಿ ರಾಜ್ಯದಲ್ಲಿ ಅತ್ಯಂತ ವಿಭಿನ್ನ ಪರಿಕಲ್ಪನೆಯ ಮೂಲಕ ಕಾರ್ಯಕ್ರಮ ಸಂಯೋಜಿಸಿ ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ನೇರ ತಲುಪಿಸುವ ಕಾರ್ಯ ಬೈಂದೂರು ಉತ್ಸವದ ಮೂಲಕ ಆಗಿದೆ.ಈ ಪರಿಕಲ್ಪನೆಯಲ್ಲಿ ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಯವರ ಪರಿಶ್ರಮ ಮಾದರಿಯಾಗಿದೆ ಎಂದರು.ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ ಪ್ರತಿ ಗ್ರಾಮಗಳಲ್ಲಿ ಗ್ರಾಮೋತ್ಸವ ಪರಿಕಲ್ಪನೆಯ ಮೂಲಕ ಕಾರ್ಯಕ್ರಮ ಸಂಘಟಿಸಿ ಬೈಂದೂರು ಉತ್ಸವದಲ್ಲಿ ಸರಕಾರದ ಎಲ್ಲಾ ಯೋಜನೆಗಳನ್ನು ತಾಲೂಕಿನಲ್ಲೂ ಆಯೋಜಿಸುವಂತಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕ ಕಿರಣ ಕೊಡ್ಲಿ, ಕೊಲ್ಲೂರು ದೇವಳದ ಪ್ರಧಾನ ಅರ್ಚಕರಾದ ಕೆ.ರಾಮಚಂದ್ರ ಅಡಿಗ, ಕೆ.ಎನ್ ಶ್ರೀಧರ ಅಡಿಗ,ಕೆ.ಎನ್.ಸುಬ್ರಹ್ಮಣ್ಯ ಅಡಿಗ,ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ,ಅನೀಲ್ ಕುಮಾರ್ ಬಿ.ಸಿ ಟ್ರಸ್ಟ್ ಧರ್ಮಸ್ಥಳ,ಉದ್ಯಮಿ ವೆಂಕಟೇಶ ಕಿಣಿ ಬೈಂದೂರು ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಡೆ ಹಾಗೂ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಯವರನ್ನು ಬೈಂದೂರು ಉತ್ಸವದ ವತಿಯಿಂದ ಸಮ್ಮಾನಿಸಲಾಯಿತು.
Leave a Reply