Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಬೈಂದೂರು ತಾಲೂಕು ಕೇಬಲ್ ಆಪರೇಟರ್ ನೂತನ ಅಧ್ಯಕ್ಷರಾಗಿ ಅಬೀಲಾಷ್ ಕೆ ಪಿ ಮರವಂತೆ ಆಯ್ಕೆ

ಬೈಂದೂರು ತಾಲೂಕು ಕೇಬಲ್ ಆಪರೇಟರ್ ಸಂಘದ ವಾರ್ಷಿಕ ಸಭೆಯು ಇಂದು ಉಪ್ಪುಂದಲ್ಲಿ ನಡೆಯಿತು, ತಾಲೂಕು ಅಧ್ಯಕ್ಷರಾದ ಕೆ ಸಚ್ಚಿದಾನಂದರವರು ಮೂರು ವರ್ಷ ಪೂರೈಸಿದ ನಂತರ ಅವರ ಸ್ಥಾನಕ್ಕೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು,
ಇಂದು ಮಧ್ಯಾಹ್ನ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಮರವಂತೆ ಅಭಿಲಾಷ್ ಕೆ ಪಿಯವರನ್ನು ಆಯ್ಕೆ ಆಗಿದ್ದು, ಉಪಾಧ್ಯಕ್ಷರಾಗಿ ಕೆ ರಾಘವೇಂದ್ರ ಖಾರ್ವಿ ಉಪ್ಪುಂದ, ಕಾರ್ಯದರ್ಶಿಯಾಗಿ ರಾಘವೇಂದ್ರ ಎನ್, ಖಚಾಂಚಿಯಾಗಿ ಅರುಣಾ ಆಚಾರ್ಯರವರನ್ನು ಆಯ್ಕೆಯಾಗಿದ್ದು, ಇದೆ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಸಚ್ಚಿದಾನಂದ ಮತ್ತು ಕಾರ್ಯದರ್ಶಿರಾದ ಸೊಮಶೇಖರರವರು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ , ಸಂಘಕ್ಕೆ ಸಂಬಂಧ ಪಟ್ಟ ಲೆಕ್ಕ ಪತ್ರಗಳನ್ನು ಹಸ್ತಾಂತರಿಸಿದರು,
ಇದೆ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಕೆ ಸಚ್ಚಿದಾನಂದ, ಮಾಜಿ ಕಾರ್ಯದರ್ಶಿಯವರಾದ ಸೊಮಶೇಖರ, ಮಾಜಿ ಖಚಾಂಚಿಯವರಾದ ಮನೋಜ್ ಶಿರೂರು, ಕೇಶವ ಖಾರ್ವಿ, ರಾಘವೇಂದ್ರ ಭಟ್, ಗುರುಕಿರಣ್, ನಾಗರಾಜ್ ಭಟ್, ಉಪಸ್ಥಿತರಿದ್ದರು

About The Author

Leave a Reply

Your email address will not be published. Required fields are marked *