Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಬೈಂದೂರು ವಲಯ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷರಾಗಿ ಬಿ ಎಚ್ ಕೆ ಕುಮಾರ್ ಆಯ್ಕೆ

ಬೈಂದೂರು ವಲಯ ನಾಡ ದೋಣಿ ಮೀನುಗಾರರ ಸಂಘದ ಇಂದು ನಡೆದ ಚುನಾವಣೆಯಲ್ಲಿ ಉಪ್ಪುಂದ ಕರ್ಕಿ ಕಳಿಯ ಬಿ ಹೆಚ್ ಕುಮಾರ್ ಖಾರ್ವಿ ಅವರು ಜಯಶಾಲಿಯಾಗಿದ್ದರು ನಾಡ ದೋಣಿಯ ಅಧ್ಯಕ್ಷರ ಪೈಪೋಟಿಯಲ್ಲಿ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದು ಮಾಜಿ ಅಧ್ಯಕ್ಷರಾದ ನಾಗೇಶ್ ಖಾರ್ವಿ ಅಳಿವೆ ಕೋಡಿ ಮತ್ತು ಕುಮಾರ್ ರವರು ಪ್ರತಿಸ್ಪರ್ಧಿಗಳಾಗಿರುತ್ತಾರೆ.
ಇಂದು ನಡೆದ  ಕಂಬದಕೋಣೆಯ ಹರಿಕಾಂತ್ ಮಹಾಜನ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಸುಮಾರು 59 ವೋಟಿಗೆ ಜಯಶಾಲಿಗಳಾಗಿರುತ್ತಾರೆ,

ಒಟ್ಟು ಮತ 2097ರಲ್ಲಿ 1128 ಮತದಾನ ಆಗಿರುತ್ತದೆ, ಇವರ ಪ್ರತಿ ಸ್ಪರ್ಧಿಯಾದ ನಾಗೇಶ್ ಖಾರ್ವಿ ಅಳಿವೆ ಕೊಡಿ 517 ಮತವನ್ನು ಪಡೆದಿರುತ್ತಾರೆ, ಕುಮಾರ್ ಬಿಎಚ್ ಕೆ 576 ಮತವನ್ನು ಪಡೆದು ಜಯಶಾಲಿ ಆಗಿರುತ್ತಾರೆ, ಈ ಸಂದರ್ಭದಲ್ಲಿ ಮಾತನಾಡಿ

ಮತದಾನ ಮಾಡಿದ ಎಲ್ಲಾ ಸ್ನೇಹಿತರು ಮತ್ತು ಹಿತೈಷಿಗಳು ನಾನು ಆಭಾರಿಯಾಗಿದ್ದೇನೆ, ಮುಂದಿನ ದಿನಗಳಲ್ಲಿ ಸಂಘದ ಸದಸ್ಯರ ಆಯ್ಕೆ ಮಾಡಿ ಊರಿನ ಮುಖಂಡರ ಸೂಚನೆಯಂತೆ ಸಂಘವನ್ನು ನಡೆಸಿಕೊಂಡು ಹೊಗುವಲ್ಲಿ ಪ್ರಯತ್ನಿಸುತ್ತೇನೆ,

ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಇತರ ಸಂಘದ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು

About The Author

Leave a Reply

Your email address will not be published. Required fields are marked *