ಸಾಗರ ನ್ಯೂಸ್ ವಿಶೇಷ

ಕುಂದಾಪುರ: ಸಾರ್ವಜನಿಕ ಸ್ಥಳದಲ್ಲಿ ಜೂಜಾಟ; 10 ಜನ ಅರೆಸ್ಟ್

ಬೈಂದೂರು ;ಕುಂದಾಪುರದ ಸಿದ್ದಾಪುರ ಗ್ರಾಮದ ಮಂಜುನಾಥ್ ಕಾಂಪ್ಲೆಕ್ಸ್‌ ಕಟ್ಟಡದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಸಂಘಟಿತರಾಗಿ ಹಣವನ್ನು ಇಟ್ಟು ಅಂದರ್ ಬಾಹ‌ರ್ ಜೂಜಾಟ ಆಟ ಆಡುತ್ತಿದ್ದ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 8,810 ರೂ ನಗದು, 10 ಮೊಬೈಲ್ ಫೋನ್, ಜೂಜಾಟ ಆಡಲು ಬಂದಿದ್ದ 3 ಮೋಟಾರು ಸೈಕಲ್ ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಹೊಸ ಕಿರಣ ನ್ಯೂ ಸ್ ಚಾನಲ್ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ಬ್ಯಾಗ್ ವಿತರಣೆ

ಬೈಂದೂರು  ಯಡಮೊಗೆ ಸರಕಾರಿ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ ಹೊಸಕಿರಣ ನ್ಯೂಸ್ ಚಾನೆಲ್ ವತಿಯಿಂದ 23 ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್‌ ಹಾಗೂ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಕೊಡುಗೆ ನೀಡಿದ ಹೊಸ ಕಿರಣ ನ್ಯೂಸ್ ಚಾನೆಲ್ ಸಂಪಾದಕರಾದ ಶ್ರೀಯುತ ಕಿರಣ್ ಪೂಜಾರಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಸರಳವಾಗಿ ಉದ್ಘಾಟಿಸಿ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಹಾಗು ಸಹಾಯ ಮನೋಭಾವದ ಕುರಿತು ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಮಲ್ಲೇಶ್‌ ಹೆಚ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.SDMC ಅಧ್ಯಕ್ಷರು ಆದ ರತ್ನಾಕರ್ H N ಕೊಡುಗೆಯ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದರು.ಶಿಕ್ಷಕಿ …

Read More »

ಹೊಸಕಿರಣ ನ್ಯೂಸ್ ಚಾನಲ್ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ಬ್ಯಾಗ್ ವಿತರಣೆ

ಬೈಂದೂರು ;ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲವರಿಮಠ ಶಾಲೆಯಲ್ಲಿ ಹೊಸಕಿರಣ ನ್ಯೂಸ್ ಚಾನೆಲ್ ವತಿಯಿಂದ 21 ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್‌ ಹಾಗೂ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಕೊಡುಗೆ ನೀಡಿದ ಹೊಸ ಕಿರಣ ನ್ಯೂಸ್ ಚಾನೆಲ್ ಸಂಪಾದಕರಾದ ಶ್ರೀಯುತ ಕಿರಣ್ ಪೂಜಾರಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಸರಳವಾಗಿ ಉದ್ಘಾಟಿಸಿ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಹಾಗು ಸಹಾಯ ಮನೋಭಾವದ ಕುರಿತು ಮಾತನಾಡಿದರು. SDMC ಅಧ್ಯಕ್ಷರು ಆದ ಗಣೇಶ್  ನಾಯ್ಕ ಕೊಡುಗೆಯ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದರು.ಶಿಕ್ಷಕಿ ಮಲ್ಲಿಕಾ ನಿರೂಪಿಸಿದರು.ವಂದನಾರ್ಪಣೆ ಸಲ್ಲಿಸುವ ಮೂಲಕ ಕಾರ್ಯಕ್ರಮ …

Read More »

ದಾಸವಾಳ ಹೂವಿನಲ್ಲಿ ಆನೆಸೋಂಡಿಲು ಇರುವಂತಹ ಹೂವು ಕಂಡುಬಂದಿದ್ದು

ದಾಸವಾಳ ಹೂವಿನಲ್ಲಿ ಆನೆಸೋಂಡಿಲು ಇರುವಂತಹ ಹೂವು ಕಂಡುಬಂದಿದ್ದು ಬೈಂದೂರು ತಾಲೂಕು ಮರವಂತೆ ಜನಾರ್ದನ ಕೆ ಎಂ ರವರ ಮನೆಯ ಅಂಗಳದಲ್ಲಿ ಇಂದು ಮುಂಜಾನೆ ಆನೆ ಮುಖದ ದಾಸವಾಳ ಹೂವು ಕಂಡುಬಂದಿರುತ್ತದೆ,7:36 PMMessage0

Read More »

ಅಕ್ರಮ ಮದ್ಯ ಮಾರಾಟ : ಆರೋಪಿ ವಶಕ್ಕೆ…!!

ಉಡುಪಿ : ನಗರದ ಬಸ್ಸು ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವಾಗ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತ ಆರೋಪಿ ಶಂಭುಲಿಂಗ ಮಡಿವಾಳ ಎಂದು ಗುರುತಿಸಲಾಗಿದೆ. ಆರೋಪಿ ಬಳಿ ಇದ್ದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದುಪ್ರಕರಣದ ವಿವರ ದಿನಾಂಕ 11.06.2025ರಂದು  ಉಡುಪಿ ನಗರ ಠಾಣೆಯ ಪೊಲೀಸರು, ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಹಳೇ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಹತ್ತಿರ ಇರುವ ಆಶಾ ಬಾರ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡು …

Read More »

ಪುತ್ತೂರಿನಲ್ಲಿದೆಯಂತೆ ನಕಲಿ ವೈದ್ಯರೆ ಹಾವಳಿ; ಪ್ರತಿಭಟನೆಯಲ್ಲಿ ಬಯಲಾಯ್ತು

ಪುತ್ತೂರು : ಪುತ್ತೂರಿನಲ್ಲಿ ಸರ್ಕಾರಿ ವೈದ್ಯಾಧಿಕಾರಿ ಮೇಲೆಹಲ್ಲೆಗೆ ಮುಂದಾದ ಪ್ರಕರಣದ ವಿಚಾರದಲ್ಲಿ ವೈದ್ಯರು ಪ್ರತಿಭಟನೆ ನಡೆಸಿದ್ದರು. ಸೂಕ್ತ ಕಾನೂನು ಭರವಸೆ ಬಳಿಕ ವೈದ್ಯರ ಪ್ರತಿಭಟನೆ ಅಂತ್ಯವಾಗಿದೆಯಾದ್ರೂ ಶನಿವಾರ(ಎ.26) ಸಂಜೆ ತನಕ ಗಡುವು ನೀಡಲಾಗಿದೆ. ಆದ್ರೆ, ಈ ನಡುವೆ ಪುತ್ತೂರಿನಲ್ಲಿ ನಕಲಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರ ಕೂಡ ಬಯಲಿಗೆ ಬಂದಿದೆ. ಪುತ್ತೂರಿನಲ್ಲಿರುವ ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ತಾಲೂಕು ಆರೋಗ್ಯ ಅಧಿಕಾರಿಗೆ ದೂರು ನೀಡಲಾಗಿದೆ, ಸ್ವತಃ ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಹೇಳಿದ್ದಾರೆ.  ಈ ವಿಚಾರವಾಗಿ ದೂರು ನೀಡಿ ಎರಡು ವರ್ಷವಾಗಿದ್ರೂ …

Read More »

ರಸ್ತೆ ಬದಿಯಲ್ಲಿ ಒದ್ದಾಡುತ್ತಿದ್ದ ವ್ಯಕ್ತಿಯ ರಕ್ಷಣೆ ;ವಿಶು ಶೆಟ್ಟಿ

ಉಡುಪಿ ಎ.25:- ಆದಿ ಉಡುಪಿ ಕರಾವಳಿ ಬೈಪಾಸ್‌ ಬಳಿಯಲ್ಲಿ ಕಳೆದ ರಾತ್ರಿ ಸುಮಾರು ಹತ್ತು ಗಂಟೆಯ ಹೊತ್ತಲಿ ವ್ಯಕ್ತಿಯೊಬ್ಬರು ಬಿದ್ದು, ತಲೆಯ ಹಿಂಬಾಗದಲ್ಲಿ ಗಾಯವಾಗಿ ರಕ್ತ ಸೊರುತ್ತಿದ್ದು, ಕೆಲವು ಹೊತ್ತುಗಳವರೆಗೆ ಒದ್ದಾಡುತ್ತಿದ್ದು, ಮಾಹಿತಿ ಪಡೆದ ವಿಶುಶೆಟ್ಟಿಯವರು 108 ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು ವ್ಯಕ್ತಿಯ ಹೆಸರು ಬಸವರಾಜ್‌ (50ವರ್ಷ) ಕಾರ್ಮಿಕನೆಂಬ ಮಾಹಿತಿ ಲಭಿಸಿದ್ದು, ಇದೀಗ ಜಿಲ್ಲಾಸ್ಪತ್ರೆಯ ತೀವ್ರ ನೀಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಜ್ಞೆ ಬಂದಿರುವುದಿಲ್ಲ. ವ್ಯಕ್ತಿಗೆ ಪಿಡ್ಸ್ ಖಾಯಿಲೆ ಇದ್ದು, ಸಂಬಂಧಿಕರ ಪತ್ತೆಯಾಗಿರುತ್ತದೆ

Read More »

ಕುಂದಾಪುರ : ಸ್ಕೂಟರ್ ಸ್ಕಿಡ್ ಆಗಿ ಸವಾರ ಸಾವು

ಕುಂದಾಪುರ : ಸ್ಕೂಟರ್ ಸ್ಕಿಡ್ ಆಗಿ ಸವಾರರೊಬ್ಬರುದಾರುಣವಾಗಿ ಸಾವನ್ನಪ್ಪಿದ ಘಟನೆ ಎ.23ರಂದು ಬೆಳಗ್ಗೆ ಕೋಟೇಶ್ವರ ನಾಗಬನ ಕಟ್ಟೆ ಸಮೀಪ ಶ್ರೀಕಾಳಿಕಾಂಬಾ ಜುವೇಲ್ಲರಿ ಮುಂಬಾಗದಲ್ಲಿ ನಡೆದಿದೆ. ಅರುಣ್‌(34) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಸಹಚಾರ ಸುಧಾಕರ (29) ಎಂಬವರು ಗಾಯ ಗೊಂಡಿದ್ದಾರೆ. ಅರುಣ್ ಹಾಗೂ ಸುದಾಕರ ಎಂಬುವವರು ಬೈಕಿನಲ್ಲಿ ಬೀಜಾಡಿ  ಜಂಕ್ಷನ್ ಕಡೆಯಿಂದ ಕೋಟೇಶ್ವರ ಪೇಟೆ ಕಡೆಗೆ ಬರುತ್ತಿರುವಾಗ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡ ಅರುಣ್, ಕೋಟೇಶ್ವರ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದು ಈ ಕುರಿತು ಸ್ಥಳೀಯ ಪೊಲಿಸ್ …

Read More »

ಕುಂದಾಪುರ : ಸ್ಟಿಂಗ್ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಕಿರಣ್ ಪೂಜಾರಿಯವರಿಂದ ಅರೆಬೆತ್ತಲೆ ಧರಣಿ ಕುಂದಾಪುರ : ಪೊಲೀಸ್‌ ಅಧಿಕಾರಿ ವಿನಯ್ ಕೊರ್ಲಹಳ್ಳಿ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿ ಹರೀಶ್ ಮೊಗವೀರ ಕರ್ತವ್ಯಲೋಪ ಎಸಗಿ ಸುಳ್ಳು ಕೇಸ್ ಗಳನ್ನು ದಾಖಲಿಸಿ ದಲಿತ ಮಹಿಳೆಯರ ಮೇಲೆ ಮತ್ತು ಪತ್ರಕರ್ತರ ಮೇಲೆ ದೌರ್ಜನ್ಯವೆಸಗಿದ್ದಾರೆ ಮತ್ತು ರವೀಶ್ ಚಂದ್ರ ಶೆಟ್ಟಿ ನ್ಯಾಯವಾದಿಯೊಬ್ಬರು ತಮಗೆ ಹಾಗೂ ತಮ್ಮ ಸಮಾಜಕ್ಕೆ ಅವಮಾನಿಸಿ ತಮ್ಮ ಮೇಲೆ ಸುಳ್ಳು ಪ್ರಕರಣಗಳು ದಾಖಲಿಸುವಂತೆ ಪೋಲಿಸರ ಮೇಲೆ ಒತ್ತಡ ಹೇರಿದ್ದಾರೆ. ಈ ಮೂವರ ವಿರುದ್ಧ ಸೋಮವಾರ ಮಿನಿ ವಿಧಾನ …

Read More »

ಪತ್ರಕರ್ತ ಹಾಗೂ ಬಿಲ್ಲವ ಹೋರಾಟಗಾರ ಕಿರಣ್‌ ಪೂಜಾರಿಯವರಿಂದ ಸೋಮವಾರ ಕುಂದಾಪುರ ತಾಲೂಕು ಆಫೀಸ್ ಎದುರಿಗೆ ಅರೆಬೆತ್ತಲೆ ಧರಣಿ

ಪೋಲೀಸ್ ಅಧಿಕಾರಿಯೊಬ್ಬರು ಹಾಗೂ ಗ್ರಾಮ ಪಂಚಾಯತ ಅಧಿಕಾರಿಯೊಬ್ಬರು ಕರ್ತವ್ಯಲೋಪ ಎಸಗಿ ತಮ್ಮ ಮೇಲೆ ದೌರ್ಜನ್ಯ ವೆಸಗಿದ್ದಾರೆ ಮತ್ತು ನ್ಯಾಯವಾದಿ ಯೊಬ್ಬರು ತಮಗೆ ಹಾಗೂ ತಮ್ಮ ಸಮಾಜಕ್ಕೆ ಅವಮಾನಿಸಿ ತಮ್ಮ ಮೇಲೆ ಸುಳ್ಳು ಪ್ರಕರಣಗಳು ದಾಖಲಿಸುವಂತೆ ಪೋಲಿಸರ ಮೇಲೆ ಒತ್ತಡ ಹೇರಿದ್ದಾರೆ. ಈ ಮೂವರ ವಿರುದ್ಧ ಸೋಮವಾರ ಕುಂದಾಪುರ ತಾಲೂಕು ಆಫೀಸ್ ಎದುರಿಗೆ ಅರೆಬೆತ್ತಲೆ ಧರಣಿ ನಡೆಸಲಿದ್ದೇನೆ ಎಂದು ಪತ್ರಕರ್ತ ಹಾಗೂ ಬಿಲ್ಲವ ಹೋರಾಟಗಾರ ಕಿರಣ್ ಪೂಜಾರಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಬಿಲ್ಲವರ ಬಗ್ಗೆ ಲಘುವಾಗಿ ಮಾತನಾಡಿದ ಹಾಗೂ ತನಗೆ ನಿಂದನೆ ಮಾಡಿದ ತನ್ನ ಸಮಾಜದ …

Read More »