Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಅಪರಿಚಿತ ಮನೋರೋಗಿಯ ರಕ್ಷಣೆ ;

ಉಡುಪಿ ಎ.9:- ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಹೊತ್ತು ಅಪರಿಚಿತ ಮನೋರೋಗಿಯೊಬ್ಬರು ಕಿರುಚಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ವಿಶುಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಗುರುರಾಜ್ ಭಟ್ (45 ವರ್ಷ). ವ್ಯಕ್ತಿ ಮಾತಿಗೆ ಸ್ಪಂದಿಸುತ್ತಿಲ್ಲವಾಗಿದ್ದು, ತನ್ನಷ್ಟಕ್ಕೆ ತುಳು ಹಾಗೂ ಕನ್ಮಡ ಶಬ್ದವನ್ನು ಕೆಲವೊಮ್ಮೆ ಆಡುತ್ತಾರೆ. ಪೇಪರ್ ಪೆನ್ನು ಕೊಟ್ಟು ಹೆಸರು ಕೇಳಿದಾಗ ಗುರುರಾಜ್ ಭಟ್ ಎಂಬಷ್ಟೆ ಬರೆಯುತ್ತಾರೆ. ಮತ್ತೇನು ಹೆಚ್ಚಿನ ಮಾಹಿತಿ ನೀಡಿಲ್ಲ. ಸ್ಥಳಿಯ ವ್ಯಕ್ತಿಯೊಬ್ಬರು ಮಾನವೀಯ ನೆಲೆಯಲ್ಲಿ ಸ್ಪಂದಿಸಿದ್ದು, ವ್ಯಕ್ತಿಯ ಮನೋರೋಗ ಕೂಗುವುದರ ಜೊತೆಗೆ ಉಲ್ಬಣಗೊಂಡು ಓಡಾಡಲು ಪ್ರಾರಂಬಿಸಿದಾಗ ಮಾಹಿತಿ ಪಡೆದ ವಿಶುಶೆಟ್ಟಿ ರಕ್ಷಿಸಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಠಾಣೆಗೆ ಮಾಹಿತಿ ನೀಡಲಾಗಿದ್ದು, ಸಂಬಂಧಿಕರು ಜಿಲ್ಲಾಸ್ಪತ್ರೆ ಅಥವಾ ಬ್ರಹ್ಮಾವರ ಠಾಣೆ ಸಂಪರ್ಕಿಸುವಂತೆ ವಿಶುಶೆಟ್ಟಿ ವಿನಂತಿಸಿದ್ದಾರೆ.

About The Author

Leave a Reply

Your email address will not be published. Required fields are marked *