April 15, 2026
img-20260414-wa00953276810593461678196.jpg
ಉಡುಪಿ.ಎ.11 :- ಶಿರ್ವ ಠಾಣಾ ವ್ಯಾಪ್ತಿಯ ಕುತ್ಯಾರಿನಲ್ಲಿ ಸಾರ್ವಜನಿಕರ ಮನೆಯೊಂದಕ್ಕೆ ಬಂದು ಕುಳಿತಿದ್ದ ಮನನೊಂದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ವಿಶುಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಿಳೆ ಸುನಿತಾ ಪೂಜಾರಿ (45 ವರ್ಷ) ಪತಿ ತೀರಿಕೊಂಡಿದ್ದು, ಮಕ್ಕಳಿಲ್ಲ. ಮಹಿಳೆ ಕಳೆದ ಕೆಲವು ತಿಂಗಳುಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ-ಹಗಲು ತಿರುಗಾಡುತ್ತ ಇರುವುದು ಕಂಡುಬಂದಿದೆ. ಮೂರು ತಿಂಗಳ ಹಿಂದೆ ಇದೇ ಮಹಿಳೆ ಅಂಬಾಗಿಲಿನ ಬಳಿ ಪೊದರೆ ಒಂದರ ಬಳಿ ಕುಳಿತಿದ್ದು ಬೀದಿ ನಾಯಿಗಳು ಆಕ್ರಮಣ ಮಾಡುವ ಸಂಭವ ಇತ್ತು. ಆ ಸಮಯದಲ್ಲಿ ಸಾರ್ವಜನಿಕರಿಂದ ರಕ್ಷಣೆ ಮಾಡಲಾಗಿತ್ತು. ಕಾನೂನು ಪ್ರಕ್ರಿಯೆಯಲ್ಲಿ ಶಿರ್ವ ಪೋಲಿಸ್ ಠಾಣೆಯ ಪೋಲಿಸರು ಹಾಗೂ ಸಖಿ ಸೆಂಟರಿನವರು ಸಹಕರಿಸಿದ್ದಾರೆ. ಸ್ಪಂದಿಸುವ ಸಂಬಂಧಿಕರು ಯಾರಾದರು ಇದ್ದಲ್ಲಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಬೇಕೆಂದು ವಿಶುಶೆಟ್ಟಿಯವರು ವಿನಂತಿಸಿದ್ದಾರೆ.
ಮಹಿಳೆಯು ಪತಿಯ ಮರಣಾ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿ ಮನೋರೋಗಿಯಾಗಿದ್ದಾರೆ. ಸಂಬಂಧಿಕರು ಮಹಿಳೆಗೆ ಚಿಕಿತ್ಸೆ ಮಾಡುವ ಪ್ರಯತ್ನ ಬಹಳಷ್ಟು ಮಾಡಿದರೂ ಫಲಿಸಲಿಲ್ಲ. ಸಂಬಂಧಿಕರನ್ನು ವಿಚಾರಿಸಿದಾಗ ನಮ್ಮ ಪ್ರಯತ್ನ ನಾವೆಲ್ಲ ಮಾಡಿ ಕೈ ಬಿಟ್ಟಾಗಿದೆ. ನಮ್ಮ ಮಾತು ಅವರು ಕೇಳುವುದಿಲ್ಲ. ಔಷಧಿ ತೆಗೆದುಕೊಳ್ಳುವುದಿಲ್ಲ. ಬೇರೆ ದಾರಿ ಕಾಣದೆ ಕೈ ಚೆಲ್ಲುವಂತಾಗಿದೆ ಎಂದು ಹೇಳಿದ್ದಾರೆ. ಆದ್ದರಿಂದ ನಾನೇ ಮಹಿಳೆಯನ್ನು ಶಿರ್ವ ಪೋಲಿಸ್ ಹಾಗೂ ಸಖಿ ಸೆಂಟ‌ರ್ ಸಹಾಯದಿಂದ ಕಾನೂನು ಪ್ರಕ್ರಿಯೆ ನಡೆಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದೇನೆ ಮುಂದಿನ ದಿನಗಳಲ್ಲಿ ಮಹಿಳೆಯು ಗುಣಮುಖರಾದ ನಂತರ ಸಂಬಂಧಿಕರೊಂದಿಗೆ ಸೇರುವಂತಾಗಲಿ .
18
:
*ವಿಶುಶೆಟ್ಟಿ ಅಂಬಲಪಾಡಿ

About The Author

Leave a Reply

Your email address will not be published. Required fields are marked *