
ವೃದ್ಧರು ಮಂಜುನಾಥ (80) ಪತ್ನಿ ತೀರಿ ಹೋಗಿದ್ದು ಒಂಟಿಯಾಗಿ ಬದುಕುತ್ತಿದ್ದರು. ಈ ಹಿಂದೆ ಇದೇ ರೀತಿ ಅಸಹಾಯಕರಾದಾಗ ವೃದ್ಧರ ವಿನಂತಿಗೆ “ಸ್ವರ್ಗ” ಆಶ್ರಮಕ್ಕೆ ದಾಖಲಿಸಲಾಗಿತ್ತು. ವೃದ್ಧರ ಸ್ವಯಿಚ್ಛೆಯಂತೆ ಗುಣಮುಖರಾದ ಮೇಲೆ ಮನೆಗೆ ಬಿಡಲಾಯಿತು. ಈಗ ಪುನಃ ತೀರಾ ಅನಾರೋಗ್ಯಕ್ಕೆ ಈಡಾಗಿದ್ದು ನಡೆದಾಡಲು ಬಲ ಇಲ್ಲದೆ ಬಿದ್ದು ಗಾಯಗಳಾಗಿದ್ದು. ಸಂಬಂಧಿಕರು ಸ್ಪಂದಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.
ರಕ್ಷಣಾ ಸಮಯ ಉದ್ಯಾವರ ರಾಮದಾಸ್ ಪಾಲನ್ ಹಾಗೂ ಹರೀಶ್ ಸಹಕರಿಸಿದರು.