Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ವೃದ್ಧರ ಮನವಿಗೆ ಜಿಲ್ಲಾಸ್ಪತ್ರೆಗೆ ದಾಖಲು

ಉಡುಪಿ ಮಾ.8: ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಒಂಟಿಯಾಗಿ ಬದುಕುತ್ತಿದ್ದ ವೃದ್ಧರೋರ್ವರು ತೀರಾ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಿಸುವಂತೆ ವಿಶು ಶೆಟ್ಟಿ ಅಂಬಲಪಾಡಿಯವರಿಗೆ ದೂರವಾಣಿ ಮುಖಾಂತರ ವಿನಂತಿಸಿದ್ದು, ಕೂಡಲೇ ಸ್ಪಂದಿಸಿದ ವಿಶು ಶೆಟ್ಟಿ ಅಂಬ್ಯುಲೆನ್ಸ್ ಮುಖಾಂತರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ವೃದ್ಧರು ಮಂಜುನಾಥ (80) ಪತ್ನಿ ತೀರಿ ಹೋಗಿದ್ದು ಒಂಟಿಯಾಗಿ ಬದುಕುತ್ತಿದ್ದರು. ಈ ಹಿಂದೆ ಇದೇ ರೀತಿ ಅಸಹಾಯಕರಾದಾಗ ವೃದ್ಧರ ವಿನಂತಿಗೆ “ಸ್ವರ್ಗ” ಆಶ್ರಮಕ್ಕೆ ದಾಖಲಿಸಲಾಗಿತ್ತು. ವೃದ್ಧರ ಸ್ವಯಿಚ್ಛೆಯಂತೆ ಗುಣಮುಖರಾದ ಮೇಲೆ ಮನೆಗೆ ಬಿಡಲಾಯಿತು. ಈಗ ಪುನಃ ತೀರಾ ಅನಾರೋಗ್ಯಕ್ಕೆ ಈಡಾಗಿದ್ದು ನಡೆದಾಡಲು  ಬಲ ಇಲ್ಲದೆ ಬಿದ್ದು ಗಾಯಗಳಾಗಿದ್ದು. ಸಂಬಂಧಿಕರು ಸ್ಪಂದಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.
.
ರಕ್ಷಣಾ ಸಮಯ ಉದ್ಯಾವರ ರಾಮದಾಸ್‌ ಪಾಲನ್ ಹಾಗೂ ಹರೀಶ್ ಸಹಕರಿಸಿದರು.

About The Author

Leave a Reply

Your email address will not be published. Required fields are marked *