Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ರಾಣಿಬಲೆ ಮೀನುಗಾರರ ಒಕ್ಕೂಟ (ರಿ.) ಉಪ್ಪುಂದ. ಇವರಿಂದ ಉಪ್ಪುಂದ ಮಡಿಕಲ್‌ ಸಮುದ್ರ ತೀರದಲ್ಲಿ ಪುರೋಹಿತರಾದ ರಾಘವೇಂದ್ರ ಭಟ್‌ ಇವರಿಂದ ಸಮುದ್ರ ಪೂಜೆ ನೆರವೇರಿಸಲಾಯಿತು.

ವರದಿ; ಜನಾರ್ದನ ಕೆ ಎಂ ಮರವಂತೆ

ಬೈಂದೂರು ;ರಾಣಿಬಲೆ ಮೀನುಗಾರರ ಒಕ್ಕೂಟ (ರಿ.) ಉಪ್ಪುಂದ. ಇವರಿಂದ ಉಪ್ಪುಂದ ಮಡಿಕಲ್‌ ಸಮುದ್ರ ತೀರದಲ್ಲಿ ಪುರೋಹಿತರಾದ ರಾಘವೇಂದ್ರ ಭಟ್‌ ಇವರಿಂದ ಸಮುದ್ರ ಪೂಜೆ ನೆರವೇರಿಸಲಾಯಿತು. ಮೀನುಗಾರಿಕಾ ಋತುವು ಸಂಪದ್ಭರಿತವಾಗಿರುವುದರೊಂದಿಗೆ ಮೀನುಗಾರಿಕೆ ಸಂಧರ್ಭ ಯಾವುದೇ ಪ್ರಕೃತಿ ವಿಕೋಪ, ಮೀನುಗಾರಿಕೆ ಸಮಯದಲ್ಲಿ ಅವಘಡಗಳು ಸಂಭವಿಸದಂತೆ ಅನುಗ್ರಹ ಕೋರಿ ಕುಲ ದೇವರಾದ ಶೃಂಗೇರಿ ಶಾರದಾಂಬೆ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿ, ಮರುದಿನ ಗ್ರಾಮದ ದೇವರುಗಳಿಗೆ ಪೂಜೆ ಸಲ್ಲಿಸಿ ತಂದ ಪ್ರಸಾದ ಹಾಗೂ ಹಾಲು ಹಣ್ಣು ಫಲ ಪುಷ್ಪಗಳನ್ನು ಈ ದಿನ ಸಮುದ್ರ ರಾಜನಿಗೆ ಅರ್ಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷರಾದ ಶ್ರೀಯುತ ವೆಂಕಟರಮಣ ಖಾರ್ವಿ, ಉಪಾಧ್ಯಕ್ಷರಾದ ತಿಮ್ಮಪ್ಪ ಖಾರ್ವಿ, ಅರಮಕೋಡಿ ಶ್ರೀ ಈಶ್ವರ ದೇವಸ್ಥಾನದ ಅಧ್ಯಕ್ಷರಾದ ಹೆಚ್. ಸುರೇಶ್ ಖಾರ್ವಿ, ರಾಣಿಬಲೆ ಮೀನುಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾದ ಸುರೇಶ್ ಖಾರ್ವಿ,
ಕೋಶಾಧಿಕಾರಿಯಾದ ಬಿ. ನಾಗೇಶ ಖಾರ್ವಿ, ಜೊತೆ ಕಾರ್ಯದರ್ಶಿಯಾದ ಸೋಮಶೇಖರ ಖಾರ್ವಿ, ಕಾರ್ಯಕಾರಿ ಸದಸ್ಯರಾದ ಎ.ಶ್ರೀನಿವಾಸ ಖಾರ್ವಿ, ಎಸ್.ಕೃಷ್ಣ ಖಾರ್ವಿ, ರಾಜೇಂದ್ರ ಖಾರ್ವಿ, ಶಂಕರ ಖಾರ್ವಿ, ನವೀನ ಖಾರ್ವಿ, ಶರತ್ ಖಾರ್ವಿ, ಹಸಿ ಮೀನು ವ್ಯಾಪಾರಸ್ಥರು, ಹಾಗೂ ಮೀನುಗಾರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *