
ಆದರೆ ಅಂಗಡಿಗಳು ಮಾತ್ರ ತೆರವು ಮಾಡದೆ ತಲೆ ಎತ್ತಿ ಹಾಗೆಯೇ ನಿಂತುಬಿಟ್ಟಿದೆ ಇದು ಯಾರ ಕೃಪಾಕಟಾಕ್ಷದ ಒಲವು ತೋರಿದೆ ಎಂಬುವುದು ಯಕ್ಷ ಪ್ರಶ್ನೆಯಾಗಿ ಸಾರ್ವಜನಿಕ ವಲಯದಲ್ಲಿ ಉಳಿದಿದೆ
ಪ್ರವಾಸೋದ್ಯಮ ಇಲಾಖೆ ಬೀಚ್ ಅಭಿವೃದ್ಧಿ ಅಡಿಯಲ್ಲಿ ಹಾಗೂ ಸೌಂದರ್ಯದ ಹಿನ್ನೆಲೆಯಲ್ಲಿ ಬೀಚಿನ ಬಳಿ ಇರುವ ಎಲ್ಲಾ ಅಂಗಡಿಗಳನ್ನು ತೆರವು ಮಾಡಬೇಕೆಂದು ಆದೇಶ ಇದ್ದರೂ ಕೂಡ !! ಇಲ್ಲಿ ಮಾತ್ರ ಜಿಲ್ಲಾ ಆಡಳಿತ ಮತ್ತು ಜಿಲ್ಲಾಧಿಕಾರಿಗಳ ಆದೇಶ ಗಾಳಿಗೆ ತೂರಿ ಅಕ್ರಮವಾಗಿ ಕೆಂಪು ಮಣ್ಣು ತುಂಬಿಸಿ ಭೂ ಮಾಫಿಯಾ ಮಾಡಲು ಹೊರಟಿದೆ,
ತಕ್ಷಣ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಇತ್ತ ಕಡೆ ಗಮನಹರಿಸಬೇಕೆಂಬುದು ಸಾರ್ವಜನಿಕರು ಹಾಗೂ ಪ್ರವಾಸಿಗರ ಅಭಿಪ್ರಾಯವಾಗಿದೆ
ಅಕ್ರಮವಾಗಿ ಕೆಂಪು ಮಣ್ಣು ತುಂಬಿಸಲು ಯಾರ ಕೈವಾಡವಿದೆ ಎಂದು ತಿಳಿದು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಗುಸು ಗುಸು ಸುದ್ದಿಯಾಗುತ್ತಿದೆ
ಅಧಿಕಾರಿಗಳು ಈ ಪ್ರಕರಣದ ಬಗ್ಗೆ ಯಾವ ನಡೆ ಇಡುತ್ತಾರೆ ಎನ್ನುವುದೇ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ,
