March 4, 2026
img-20260211-wa00065872455127960700898.jpg
ಕುಂದಾಪುರ;ರಕ್ತದಾನದ ಮೂಲಕ ಜೀವ ಉಳಿಸುವ ಪುಣ್ಯ ಕಾರ್ಯವನ್ನು ಮಾಡುತ್ತಿರುವ ಅಭಯಹಸ್ತ ಸಂಸ್ಥೆಗೆ ಯಾವುದೇ ರೋಗಿಯ ಅಶೀರ್ವಾದಕ್ಕಿಂತ ದೊಡ್ಡ ಸನ್ಮಾನ ಬೇರೊಂದಿಲ್ಲ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆಯವರು ಅಭಿಪ್ರಾಯಪಟ್ಟರು. ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಆಯೋಜಿಸುತ್ತಿರುವ 300ನೇ ರಕ್ತದಾನ ಶಿಬಿರದ ಲಾಂಛನ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ 6 ವರ್ಷದಲ್ಲಿ ವಿವಿಧ ಸಂಘಟನೆಗಳ ಸಹಕಾರದಲ್ಲಿ 40,000 ಯೂನಿಟ್ ರಕ್ತ ಸಂಗ್ರಹಿಸಿರುವುದು ಅಭಯಹಸ್ತ ಸಂಸ್ಥೆಯ ಸಮಾಜದ ಸೇವೆಗೆ ಹಿಡಿದ ಕೈಗನ್ನಡಿ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾನ ಮನಸ್ಕರ ಸಹಕಾರದಲ್ಲಿ ಅಭಯಹಸ್ತವು ಇಂತಹ ಸಾಧನೆ ಮಾಡಿರುವುದು ಇತರ ಸಮಾಜಸೇವಾ ಸಂಸ್ಥೆಗಳಿಗೆ ಪ್ರೇರಣೆಯಾಗಿದೆ ಎಂದು ಜಯಪ್ರಕಾಶ್ ಹೆಗ್ಡೆಯವರು ಶ್ಲಾಘಿಸಿದರು

ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಇದರ ಸಾರಥ್ಯದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ 300ನೇ ರಕ್ತದಾನ ಶಿಬಿರದ ಲಾಂಛನ ಬಿಡುಗಡೆ ಸಮಾರಂಭವಾದ ಹೆಗ್ಗುರುತು -300 (ಪೊಡವಿಗೊಡೆಯನ ಪದತಲದಲ್ಲಿ ಅಭಯಹಸ್ತ 300ನೇ ರಕ್ತದಾನ ಶಿಬಿರದ -ಮೈಲುಗಲ್ಲು) ಎಂಬ ಯಶಸ್ವಿ ಸಮಾರಂಭವನ್ನು ಕುಂದಾಪುರದ ರೋಟರಿ ಭವನದಲ್ಲಿ ದಿನಾಂಕ

08/02/2026  ಆಯೋಜಿಸಲಾಗಿತ್ತು,ಕುಂದಾಪುರದ ಆದರ್ಶ ಆಸ್ಪತ್ರೆಯ ಡಾ. ಆದರ್ಶ್ ಹೆಬ್ಬಾ‌ರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯರಾದ ಡಾ. ನಾಗೇಶ್‌, ಜನಸೇವಾ ಟ್ರಸ್ಟ್ ರಿ. ಗಿಳಿಯಾರು ಇದರ ಅಧ್ಯಕ್ಷರಾದ ಶ್ರೀ ವಸಂತ ಗಿಳಿಯಾರ್, ಸಹನಾ ಗ್ರೂಫ್ ಆಫ್ ಹೋಟೆಲ್ಸ್ ಕುಂದಾಪುರ ಇದರ ಮಾಲೀಕರಾದ ಶ್ರೀ ಸುರೇಂದ್ರ ಶೆಟ್ಟಿ, ಮೊಬೈಲ್‌ ರಿಟೇಲರ್ಸ್‌ ಆಸೊಷಿಯೇಶನ್‌ ಉಡುಪಿ ಇದರ ಅಧ್ಯಕ್ಷರಾದ ಶ್ರೀ ವಿವೇಕ್ ಸುವರ್ಣ, ಜೆಸಿಐ ಕುಂದಾಪುರ ಇದರ

ಅಧ್ಯಕ್ಷರಾದ ಶ್ರೀ ರಾಕೇಶ್‌ ಶೆಟ್ಟಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಇದರ ಉಪಾಧ್ಯಕ್ಷರಾದ ಶ್ರೀ ರಾಜೇಶ್ ಮೆಂಡನ್ ಬೈಪಾಸ್, ರಕ್ತದ ಆಪಲ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್‌ ಅಧ್ಯಕ್ಷರು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಉಪಸ್ಥಿತರಿದ್ದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ. ಕಿರಣ್ ಕುಮಾ‌ರ್ ಕೊಡ್ಲಿ ಹಾಗೂ ಡಾ. ಬಳ್ಳೂರು ಗೋಪಾಲ ಆಚಾರ್ಯ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭಕೋರಿದರು.

ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಶ್ರೀ ಪ್ರಶಾಂತ್ ತಲ್ಲೂರು, ಶ್ರೀ ಚರಣ್ ಗಂಗೊಳ್ಳಿ, ಶ್ರೀ ಚೇತನ್ ಖಾರ್ವಿ ಹಾಗೂ ಶ್ರೀ ದಿನೇಶ್ ಕಾಂಚನ್ ಬಾರಿಕೆರೆ ಯಶಸ್ವಿ ಕಾರ್ಯಕ್ರಮವನ್ನು ಸಂಘಟಿಸಿದರು. ಶ್ರೀ ಅಭಿಜಿತ್ ಕುಂದಾಪುರ ಸ್ವಾಗತಿಸಿ, ಕುಮಾರಿ ಚಂದ್ರಿಕಾ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಸುಧಾಕರ್ ಕಾಂಚನ್ ಕುಂದಾಪುರ ಧನ್ಯವಾದ ಅರ್ಪಿಸಿದರು

About The Author

Leave a Reply

Your email address will not be published. Required fields are marked *