


ಈ ವೇಳೆ ದಸ್ತಗಿರಿ ಸಾಹೇಬರು ಮಾತನಾಡಿ ಕನ್ನಡ ಸಂಘಟನೆ ಇಂತಹ ಅದ್ಭುತ ಪ್ರಶಸ್ತಿ ನೀಡಿ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಮತ್ತು ನಾನು ಚಿಕ್ಕವನಾಗಿದ್ದಾಗ ಶಿವಮೊಗ್ಗ ಬೆಂಗಳೂರು ಭಾಗದಲ್ಲಿ ಕನ್ನಡ ರಕ್ಷಣಾ ವೇದಿಕೆ ಬಾವುಟ ಹಿಡಿದಿದ್ದೇನೆ ಮತ್ತು ಈಗ ನನಗೆ ಕನ್ನಡಿಗರ ಸೇವೆ ಮಾಡಲು ಅವಕಾಶ ಸಿಕ್ಕಿದೆ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜನರಿಗೋಸ್ಕರ ಹಗಲು ರಾತ್ರಿ ಎನ್ನದೆ ಸೇವೆ ಮಾಡುತ್ತೇನೆ ಎಂದರು.
ಈ ಸಂದರ್ಭ ಕರವೇ ಜಿಲ್ಲಾಧ್ಯಕ್ಷ ಅ. ರಾ ಪ್ರಭಾಕರ್ ಪೂಜಾರಿ, ಪುರುಷೋತ್ತಮ್ ಪೂಜಾರಿ ಕೊಡಪಾಡಿ, ಕುಂದಾಪುರ ತಾಲೂಕು ಅಧ್ಯಕ್ಷ ಸಂತೋಷ್ ಶೆಟ್ಟಿ ಪಡುಮುಂಡು, ಬೈಂದೂರು ತಾಲೂಕು ಅಧ್ಯಕ್ಷ ರಾಜೇಶ್ ಪೂಜಾರಿ, ಕುಂದಾಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣ ಮೊಗವೀರ, ಕುಂದಾಪುರ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ನಾಗರಾಜ್ ಕೆಂಚನೂರು ಗೋಪಾಲ್ ಕಾವಾಡಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.
