April 15, 2026
img_20260415_1951544033175568320693259.jpg
ಕುಂದಾಪುರ: ಕುಂದಾಪುರ ತಾಲೂಕಿನ ಬಸೂರು ಗ್ರಾಮದ ಮೂಡ್ಕರಿ ಪ್ರದೇಶದಲ್ಲಿರುವ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಸಂಬಂಧಿಸಿದಂತೆ ಗಂಭೀರ ಅಪರಾಧ ಪ್ರಕರಣ ದಾಖಲಾಗಿದೆ.
ದಿನಾಂಕ 12/04/2026 ರಂದು ಬೆಳಿಗ್ಗೆ ಸುಮಾರು 11:00 ಗಂಟೆಯ ವೇಳೆ, ಬಿ.ಟಿ. ಮಂಜು ಬಡಬಾಳು (ಸಿದ್ದಾಪುರ), ಕೇಶವ, ರಾಜು, ಕೃಷ್ಣ ಸೇರಿದಂತೆ ಸುಮಾರು 15 ಜನರ ಗುಂಪು ಗರಡಿಗೆ ಅನಧಿಕೃತವಾಗಿ ಪ್ರವೇಶಿಸಿದರೆಂದು ಆರೋಪಿಸಲಾಗಿದೆ. ಆರೋಪಿಗಳು ಗರಡಿಯ ಬಾಗಿಲಿನ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ಪಿರ್ಯಾದಿದಾರರಾದ ಅಶೋಕ ಪೂಜಾರಿ (48), ಬಸೂರು ಗ್ರಾಮ, ಕುಂದಾಪುರ ಅವರು ಇದನ್ನು ಪ್ರಶ್ನಿಸಿದಾಗ, ಆರೋಪಿಗಳು ಅವರಿಗೆ ಅವಾಚ್ಯವಾಗಿ ಬೈದು ನಿಂದಿಸಿದ್ದಾರೆ ಎನ್ನಲಾಗಿದೆ.

ಇದಲ್ಲದೆ, ಗರಡಿಯ ಒಳಭಾಗದಲ್ಲಿ ನಗದು ಹಾಗೂ ಚಿನ್ನ ಇರುವುದಾಗಿ ತಿಳಿದುಬಂದಿದ್ದು, ಬೀಗ ಒಡೆದ ಪರಿಣಾಮ ಸುಮಾರು ₹500/-ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 20/2026 ಕಲಂ 329(4), 352, 324(4) ಹಾಗೂ 3(5) BNS ಪ್ರಕಾರ ಪ್ರಕರಣ ದಾಖಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತಿದಾರೆ.

About The Author

Leave a Reply

Your email address will not be published. Required fields are marked *