June 3, 2026
img-20251220-wa00582009117345469113441.jpg

ಬೈಂದೂರು ತಾಲೂಕು ಮರವಂತೆ ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕರಿ ಸಂಘದ 25 ನೇ  ವರ್ಷದ  ರಜತ ಮಹೋತ್ಸವದ ಬೆಳ್ಳಿ ಹಬ್ಬ 2026  ಕಾರ್ಯಕ್ರಮವು  ಮರವಂತೆ ಶ್ರೀರಾಮಮಂದಿರ ನಡೆಯಿತು ಬೆಳಿಗ್ಗೆ 8:00ಗೆ ಸಹಕಾರಿ ಸಂಘದ ಸದಸ್ಯರ ನೊಂದಾವಣಿ ಕಾರ್ಯಕ್ರಮ  ಸಪ್ತಸ್ವರ ಮ್ಯೂಸಿಕ್ ಗ್ರೂಪ್ ನವರಿಂದ ಚಲನಚಿತ್ರ ಮತ್ತು ಜನಪದ ಗೀತೆಗಳ ಕಾರ್ಯಕ್ರಮ ನಡೆಯಿತು,
ಸಭಾ ಕಾರ್ಯಕ್ರಮಗಳಲ್ಲಿ  ಉಡುಪಿ  ಜಿಲ್ಲೆಯ ಸಹಕಾರಿ ಸಂಘದ ಅಧ್ಯಕ್ಷರಾದ ಬಿ ಜಯಕರ್ ಶೆಟ್ಟಿ ಮಾತನಾಡಿ ಸಹಕಾರಿ ಸಂಘ ಎನ್ನುವುದು  ಖಾಸಗಿ ಸಂಸ್ಥೆ ಅಲ್ಲಾ  ಇದು ಸ್ವಾಮ್ಯದ ಸಂಸ್ಥೆ, ಮುಂದಿನ ದಿನಗಳಲ್ಲಿ  ಸಹಕಾರಿ ಕ್ಷೇತ್ರದಿಂದ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂಬುದನ್ನು  ಕೇಂದ್ರ ಮತ್ತು ರಾಜ್ಯ  ಜನಪ್ರತಿನಿಧಿಗಳು ಮನಗಂಡಿದ್ದಾರೆ, ಇದನ್ನು ಉಳಿಸಿಕೊಂಡು ಹೋಗುವ ಕೆಲಸ ಆಯಾಯ ಸಂಘ ಸಂಸ್ಥೆಗಳು ಮಾಡಬೇಕು, ಸಹಕಾರಿ ಸಂಘದ ಅಧ್ಯಕ್ಷರಾದ ಕಮಾಲಾಕ್ಷಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು, ಸಂಘದ ಸದಸ್ಯರು ಮತ್ತು ಸಿಬ್ಬಂದಿಗಳನ್ನು ಗೌರವಿಸಲಾಯಿತು,


ಡಾಕ್ಟರ್ ಪದ್ಮನಾಭ ಆಚಾರ್ಯ ದುರ್ಗಾ ಆಸ್ಪತ್ರೆ ಹಾಲಾಡಿ ಇವರಿಂದ ಆರೋಗ್ಯ ಮಾಹಿತಿ ಬಗ್ಗೆ ತಿಳಿಸಿದರು.   ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ,ಉಡುಪಿ ಶಾಸಕರಾದ ಯಾಸ್ಪಲ್ ಸುವರ್ಣ,ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಸಹಕಾರಿ ಸಂಘದ ಅಧ್ಯಕ್ಷರಾದ ಜೈ ಕರ್ ಶೆಟ್ಟಿ ಇಂದ್ರಾಳಿ, ಆಶೀಕಾ ಸ್ಥಾಪನಾ ಅಧ್ಯಕ್ಷರಾದ ಶ್ರೀರಾಮ ಕಾರಂತರು, ಸಾಂಸ್ಕೃತಿಕ ಹಿತಚಿಂತಕರು ಕೆಎಂ ಶೇಖ‌ರ ಬೆಂಗಳೂರು, ಮೀನುಗಾರಿಕೆ ಜಂಟಿ ನಿರ್ದೇಶಕರಾದ ಕುಮಾರಸ್ವಾಮಿ, ಬಿ ವಿ, ಸಹಕಾರಿ ಸಂಘದ ಉಪನಿಬಂಧಕರು ಶ್ರೀಮತಿ ಲಾವಣ್ಯಕೆಆರ್, ಸಹಕಾರಿ ಸಂಘದ ಲೆಕ್ಕ ಪರಿಶೋಧಕ ತೇಜಮೂರ್ತಿ ಆರ್, ಸಹಕಾರ ಸಂಘದ ಉಪನಿರ್ದೇಶಕ ಸುದೀರ್ ಕುಮಾರ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಟಗಾರ್ ನಾಗರಾಜ್, ಮೀನುಗಾರಿಕೆ ಸಹ ನಿರ್ದೇಶಕರು ಶ್ರೀಮತಿ ಆಶಾ, ರಾಮಮಂದಿರದ ಅಧ್ಯಕ್ಷರಾದ ಸುರೇಶ್ ಖಾರ್ವಿ ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಶ್ರೀನಿವಾಸ್ ಅಡಿಗ, ಮಹಿಳಾ  ಮೀನುಗಾರರ ಅಧ್ಯಕ್ಷರಾದ ಶ್ರೀಮತಿ ಕಮಲಾಕ್ಷಿ ಖಾರ್ವಿ ,ಉಪಾಧ್ಯಕ್ಷರಾದ ವನೀತಾ ಖಾರ್ವಿ , ನಿರ್ದೆಶಕರಾದ ಸವಿತಾ ಖಾರ್ವಿ, ನಾಗರತ್ನ ಖಾರ್ವಿ, ಸುಜಾತಾ ಪೂಜಾರಿ, ಪೂರ್ಣಿಮಾ ಮೊಗವೀರ, ನೇತ್ರಾವತಿ ಪೂಜಾರಿ, ವಿಜಯದಾಶ್,ಶೈಲಾ ಖಾರ್ವಿ,ಆಶಾ ಪೂಜಾರಿ, ನರ್ಬಿಸಾ ಅರೆಹೊಳೆ ಕ್ರಾಸ್, ವೆದಿಕೆಯಲ್ಲಿ ಉಪಸ್ಥಿತರಿದ್ದರು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ಶ್ರೀನಿವಾಸ್ ಅಡಿಗ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು, ಸಂಘದ ಲೆಕ್ಕಿಗ ರೇಖಾ ಜೆ ಕೆ ವಂದಿಸಿದರು, ಸಿಬ್ಬಂದಿಗಳಾದ ಚೈತ್ರಾ ಆಚಾರ್ಯ  ಹರ್ಷ ಸಹಕರಿಸಿದರು, ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *