Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ವಜ್ರದುಂಬಿ  ಗೆಳೆಯರ ಬಳಗ (ರಿ) ಬಿಜೂರು ಉಚಿತ ಚರ್ಮ ರೋಗ ಚಿಕಿತ್ಸಾ ಶಿಬಿರ ಹಾಗೂ ಔಷಧಿ ವಿತರಣೆ

ಬೈಂದೂರು; ವಜ್ರದುಂಬಿ ಗೆಳೆಯರ ಬಳಗ ಬಿಜೂರು ಇದರ ಹತ್ತನೇ ವರ್ಷದ ಉಚಿತ ಚರ್ಮ ರೋಗ ಮತ್ತು ಉಚಿತ ಔಷಧಿ ವಿತರಣೆ ಉಪ್ಪುಂದ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆಯಿತು,

ಉಚಿತ ಚರ್ಮರೋಗ ಚಿಕಿತ್ಸಾ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದ ಸತೀಶ್ ಪೈ ಚರ್ಮರೋಗ ವಿಭಾಗದ ನುರಿತ ವೈದ್ಯರು ಕೆ ಎಂ ಸಿ ಮಣಿಪಾಲ ಇವರಿಂದ ನೆರವೇರಿತು,

ಸತ್ತೀಶ್ ಪೈಯವರು ಮಾತನಾಡಿ, ವಜ್ರದುಂಬಿ ಗೆಳೆಯರ ಬಳಗ ಸುಮಾರು ಹತ್ತು ವರ್ಷದಿಂದ ಇಂಥ ಕಾರ್ಯಕ್ರಮಗಳು ಮಾಡ್ತಾ ಇದ್ದಾರೆ ಚರ್ಮದಲ್ಲಿ ಸೊಂಕು ಕಾಣಿಸಿಕೊಂಡಾಗ ರೋಗಿಗಳು ಮೆಡಿಕಲ್ ಶಾಪ್ ಅಲ್ಲಿ ಔಷಧಿಯನ್ನು ತೆಗೆದುಕೊಳ್ಳದೆ ನೇರವಾಗಿ ಚರ್ಮದ ವೈದ್ಯರ ಹತ್ತಿರದ ತೆಗೆದುಕೊಳ್ಳುವುದು ಉತ್ತಮ


ಗೆಳೆಯರ ಬಳಗ ಡಿಜೆ ಇದರ ದಶಮಾನೋತ್ಸವ ಸಂಭ್ರಮದ ಉಚಿತ ಚರ್ಮರೋಗ ಚಿಕಿತ್ಸಾಬಿರ ಹಾಗೂ ಔಷಧಿ ವಿತರಣೆ ಇಂದು ಉಪ್ಪುಂದ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆಯಿತು ಮಣಿಪಾಲದ ಕೆಎಂಸಿ ಮತ್ತು ಡಾಕ್ಟರ್ ಇವರ ಹೆಚ್ಚುವರಿ ತಂಡದಿಂದ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಶಿಬಿರವನ್ನು ಏರ್ಪಡಿಸಿರುತ್ತಾರೆ, ಇದೇ ಸಮಯದಲ್ಲಿ ಮುಖ್ಯ ಅತಿಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು,

ವಜ್ರದುಂಬಿ ಗೆಳೆಯರ ಬಳಗ ಬಿಜೂರು ಇದರ ವತಿಯಿಂದ ನೆಡೆಯುತ್ತಿರುವ
ಉಚಿತ ಚರ್ಮರೋಗ ಚಿಕಿತ್ಸಾ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದ ಸತೀಶ್ ಪೈ ಚರ್ಮರೋಗ ವಿಭಾಗದ ನುರಿತ ವೈದ್ಯರು ಕೆ ಎಂ ಸಿ ಮಣಿಪಾಲ
ಇಂದಿನ ಕಾರ್ಯಕ್ರಮದ ಮುಖ್ಯ ಅತಿಥಿ ವೈದ್ಯರಾದ ವೈಲಾ ಸಿಕ್ವೆರಾ,
ಸಂಸ್ಥೆಯ ಗೌರವಾಧ್ಯಕ್ಷರಾದ ಉದ್ಯಮಿ ಲಕ್ಷ್ಮಿಕಾಂತ್ ಬೆನ್ನೂರು
ವಜ್ರದುಂಬಿ ಗೆಳೆಯರ ಬಳಗದ ಸದಸ್ಯರಾದ ಸುರೇಶ್ ಬೆನ್ನೂರು
ವೈದ್ಯಕೀಯ ಪ್ರತಿನಿಧಿ ಸುರೇಂದ್ರ ಖಾರ್ವಿ ತ್ರಾಸಿ ಕಾರ್ತಿಕ್ ಪಂಡಿತ್ ಸಾಸ್ತಾನ, ಪ್ರಮೋದ್ ಕುಮಾರ್ ಕೋಟಾ,
ರಾಘವೇಂದ್ರ ಪ್ರಭು ಕರ್ವಾಲ್ ಮತ್ತು ವಜ್ರದುಂಬಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು

ಸುಬ್ರಹ್ಮಣ್ಯ ಬಿಜೂರು  ಕಾರ್ಯಕ್ರಮ ನಿರೂಪಿಸಿದರು

ಪುರುಷೋತ್ತಮ ದಾಸ್ ವಂದನೆ ಗೈದರು

About The Author

Leave a Reply

Your email address will not be published. Required fields are marked *