ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶಂಕರ್ ಶೆಟ್ಟಿಯವರು “ನನ್ನನ್ನು ಸಂಸ್ಥೆಯಲ್ಲಿ ಕೇವಲ ಹೆಸರಿಗಾಗಿ ಹಾಗೂ ಪತ್ರಿಕೆಯಲ್ಲಿ ಕಾಟಚಾರಕ್ಕಾಗಿ ಜವಾಬ್ದಾರಿ ನೀಡಿದ್ದು ತಿಳಿದು ನಾನು ರಾಜೀನಾಮೆ ನೀಡಿದ್ದೆ. ಈ ಅವಕಾಶ ನೀಡಿದ ಸಂಸ್ಥೆಗೆ ನನ್ನ ಧನ್ಯವಾದಗಳು. ಆದರೆ ಅಂದಿನಿಂದಲೇ ನಾನು ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಹಾಗೂ ಪತ್ರಿಕೆಯಲ್ಲಿ ಹೊಂದಿದ್ದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಇತ್ತೀಚಿಗೆ ಪತ್ರಿಕೆಗಳಲ್ಲಿ ಈ ಸಂಸ್ಥೆಯ ಜಿಲ್ಲಾಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ವರದಿಗಾರನ ವಿರುದ್ಧ ಸಾಕ್ಷಿ ಸಮೇತವಾಗಿ ಗಂಭೀರ ಆರೋಪ ಕೇಳಿ ಬಂದಿರುತ್ತದೆ. ಈ ವರದಿ ನಂತರ ಈ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಿಗೆ ನೊಂದವರು, ಮೋಸ ಹೋದವವರು, ಸಂತ್ರಸ್ತರು ಕರೆ ಮಾಡಿದರೆ, ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶಂಕರ್ ಶೆಟ್ಟಿಯವರು ದೇವೇಂದ್ರ ಸುವರ್ಣ ಅವರಿಗೆ ಮಾಹಿತಿ ಕೇಳಿ ನಾನು ಮುಂಬೈಯಲ್ಲಿ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದೇನೆ ಎಂದು ತಪ್ಪಿಸಿಕೊಳ್ಳುತ್ತಿದ್ದು ನನ್ನ ಗಮನಕ್ಕೆ ಬಂದಿರುತ್ತದೆ. ಹಾಗಾಗೀ “ಇನ್ನು ಮುಂದೆ ನನಗೂ ಆ ಸಂಸ್ಥೆಗೂ ಅಥವಾ ಪತ್ರಿಕೆಯ ಯಾವುದೇ ಚಟುವಟಿಕೆಗಳಿಗೆ ಸಂಬಂಧವಿರುವುದಿಲ್ಲ. ನನ್ನ ಶಿಫಾರಸ್ಸಿನ

