
ಯುವಕ ಅಜಯ್ ಮುಂಡ(30) ಒಡಿಸ್ಸಾ ಮೂಲದವನಾಗಿದ್ದು 5 ತಿಂಗಳ ಹಿಂದೆ ಮದುವೆಯಾಗಿದ್ದು ಯಾವುದೋ ಕಾರಣಕ್ಕೆ ಖಿನ್ನತೆಗೊಳಗಾಗಿ ಊರು ಬಿಟ್ಟಿದ್ದ. ಕೊಲ್ಲೂರಿನಲ್ಲಿ ಅಸಹಾಯಕನಾದ ಸಮಯ ವಿಶು ಶೆಟ್ಟಿ ಮಾಹಿತಿ ಪಡೆದು ಪೊಲೀಸ್ ಸಹಾಯದಿಂದ ದಾಖಲಿಸಿದ್ದರು.
ಯುವಕನ ಬಗ್ಗೆ ಮಾಹಿತಿ ಪಡೆದ ಒಡಿಸ್ಸಾದ ಕುಟುಂಬಸ್ಥರು ಕೂಡಲೇ ಕರೆತರಲು ಸಹೋದರನನ್ನು ಉಡುಪಿಗೆ ಕಳುಹಿಸಿದ್ದಾರೆ
ಪತ್ನಿ 3 ತಿಂಗಳ ಗರ್ಭಿಣಿ
ಈ ಮದ್ಯೆ ಯುವಕನ ಪತ್ನಿ 3 ತಿಂಗಳ ಗರ್ಭಿಣಿಯಾಗಿದ್ದು ಪತಿಯ ಕಣ್ಮರೆಯಿಂದ ನೊಂದಿದ್ದು ಇದೀಗ ಪತಿಯೊಂದಿಗೆ ಫೋನ್ ನಲ್ಲಿ ಮಾತನಾಡಿ ನಿಟ್ಟುಸಿರು ಬಿಟ್ಟಿದ್ದಾಳೆ.
ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಡಿಸ್ಸಾದ ಬಿರ್ಸಾ ಮುಂಡಾ ಸಮುದಾಯದವರಾಗಿದ್ದಾರೆ.
ವಿಶು ಶೆಟ್ಟಿಯಿಂದ ರೈಲ್ವೆ ಟಿಕೆಟ್
ಸಹೋದರ ತರಾತುರಿಯಲ್ಲಿ ಉಡುಪಿಗೆ ಬಂದಿದ್ದು ಆರ್ಥಿಕವಾಗಿ ಬಡ ಕುಟುಂಬ. ಊರಿಗೆ ಹೋಗಲು ಹಣದ ಕೊರತೆ ಇರುವ ಬಗ್ಗೆ ಮನಗಂಡ ವಿಶು ಶೆಟ್ಟಿ ರೈಲ್ವೆ ಟಿಕೆಟಿನ ಹಣ ನೀಡಿ ಸ್ಪಂದಿಸಿದ್ದಾರೆ.
ಜಿಲ್ಲಾಸ್ಪತ್ರೆಯ ವೈದ್ಯರು, ECRC ಸಿಬ್ಬಂದಿಗಳು ಹಾಗೂ ವಿಶೇಷವಾಗಿ ಸಂಬಂಧಿಕರ ಪತ್ತೆಗೆ ಕೊಲ್ಲೂರು SI ವಿನಯ್ ಹಾಗೂ ECRC ಸುರೇಶ್ ಸಹಕರಿಸಿದ್ದಾರೆ.





Leave a Reply