Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಬೈಂದೂರು: ಮರವಂತೆ ಮೀನುಗಾರಿಕಾ ಬಂದರಿನಲ್ಲಿ ಇತ್ತೀಚೆಗೆ ಭಾರಿ ಗಾಳಿಯ ಅಬ್ಬರಕ್ಕೆ ಆಯತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ನಾಗರಾಜ ಖಾರ್ವಿ ಅವರ ಕುಟುಂಬಕ್ಕೆ ತಕ್ಷಣ ಸರ್ಕಾರದಿಂದ ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ.

ಬೈಂದೂರು;ಮೀನುಗಾರಿಕೆಯನ್ನೇ ಜೀವನಾಧಾರವಾಗಿಸಿಕೊಂಡಿದ್ದ ನಾಗರಾಜ ಖಾರ್ವಿ ಅವರು ದುರ್ಘಟನೆಯಲ್ಲಿ ಮೃತಪಟ್ಟಿದ್ದು, ಇದರಿಂದ ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಬಡ ಮೀನುಗಾರ ಕುಟುಂಬಕ್ಕೆ ಸರ್ಕಾರ ಕೂಡಲೇ ಸ್ಪಂದಿಸಿ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ನಿನ್ನೆ ಮಿತ್ರರಾದ ಪತ್ರಕರ್ತ ನಾಗರಾಜ್ ಮರವಂತೆ  ನಮ್ಮ ಮನವಿಯನ್ನು ಸ್ವೀಕರಿಸಿ ಅವರು ಬೆಂಗಳೂರಿನಲ್ಲಿ ರಾಜ್ಯದ ಬಂದರು ಮತ್ತು ಮೀನುಗಾರಿಕಾ ಸಚಿವರಾದ ಶ್ರೀ ಬಸವಂತಪ್ಪ ಅವರನ್ನು ಭೇಟಿಯಾಗಿ, ಘಟನೆ ಕುರಿತು ವಿವರಿಸಿ ಸಂತ್ರಸ್ತ ಕುಟುಂಬದ ನೆರವಿಗೆ ಧಾವಿಸುವಂತೆ ಮನವಿ ಸಲ್ಲಿಸಿದರು.
ಮೀನುಗಾರರ ಸುರಕ್ಷತೆ ಹಾಗೂ ಸಂಕಷ್ಟದಲ್ಲಿರುವ ಮೀನುಗಾರ ಕುಟುಂಬಗಳ ನೆರವಿಗೆ ಸರ್ಕಾರ ಆದ್ಯತೆ ನೀಡಬೇಕು. ನಾಗರಾಜ ಖಾರ್ವಿ ಅವರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ತಕ್ಷಣ ಪರಿಹಾರ ಒದಗಿಸುವಂತೆ ಸಚಿವರಲ್ಲಿ ಒತ್ತಾಯಿಸಲಾಗಿದೆ.
ಸಂತ್ರಸ್ತ ಬಡ ಮೀನುಗಾರ ಕುಟುಂಬಕ್ಕೆ ಸರ್ಕಾರ ತಕ್ಷಣ ಸ್ಪಂದಿಸಿ, ಸೂಕ್ತ ಪರಿಹಾರ ನೀಡಬೇಕೆಂಬುದು ಕುಟುಂಬಸ್ಥರು ಹಾಗೂ ಸ್ಥಳೀಯರ ಪ್ರಮುಖ ಮನವಿಯಾಗಿದೆ.

About The Author

Leave a Reply

Your email address will not be published. Required fields are marked *