Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಉಡುಪಿ: ಕಾರು ಕೆಟ್ಟು ರಸ್ತೆಯಲ್ಲಿ ಮಲಗಿದ್ದ ರೋಗಿಯನ್ನು ಉಚಿತವಾಗಿ ಆಸ್ಪತ್ರೆಗೆ ತಲುಪಿಸಿದ ಈಶ್ವ‌ರ್ ಮಲ್ಪೆ

ಉಡುಪಿ ಜಿಲ್ಲೆಯ ಪೆರ್ಡೂರು ಸಮೀಪದ ಪಾಡಿಗಾರ ಎಂಬಲ್ಲಿ ಚಿತ್ರದುರ್ಗದಿಂದ ಮಂಗಳೂರಿಗೆ ಗ್ಯಾಂಗ್ರಿನ್ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯನ್ನು ಕರೆದುಕೊಂಡು ಬರುತ್ತಿದ್ದ ಖಾಸಗಿ ಕಾರೊಂದು, ಚಾಲಕನ ನಿದ್ದೆ ಮಂಪರಿಗೆ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯ ಚರಂಡಿಗೆ ಸಿಲುಕಿದ ಘಟನೆ ಮುಂಜಾನೆ 4:00 ಗಂಟೆಗೆ ನಡೆದಿದೆ

ಅದೇ ದಾರಿಯಲ್ಲಿ ಮಲ್ಪೆ ಬೀಚ್ ಗೆ ಬರುತ್ತಿದ್ದ ಈಶ್ವ‌ರ್ ಮಲ್ಪೆಯವರ ಸ್ನೇಹಿತರಾದ ಭದ್ರಾವತಿಯ ಸ್ನೇಕ್ ಜೋಸ್ವಾ ಹಾಗೂ ಅವರ ತಂಡವು ಇವರನ್ನು ಗಮನಿಸಿದೆ. ರೋಗಿಯನ್ನು ಹನಿಹನಿ ಮಳೆಗೆ ರಸ್ತೆಯಲ್ಲಿಯೇ ಮಲಗಿಸಿದ್ದನ್ನು ಕಂಡು ತಕ್ಷಣ ಈಶ್ವ‌ರ್ ಮಲ್ಪೆಯವರಿಗೆ ಕರೆಯ ಮೂಲಕ ಕೂಡಲೇ ಸ್ಥಳಕ್ಕೆ ಧಾವಿಸಿ ರೊಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ

About The Author

Leave a Reply

Your email address will not be published. Required fields are marked *