Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಶಾಲಾ ಮಕ್ಕಳ ಊಟದಲ್ಲಿ ಹಾಳಾದ ಮೊಟ್ಟೆ-ಉಡುಪಿಯಲ್ಲಿ ನಕಲಿ ಮೊಟ್ಟೆ ಹಾವಳಿ- ಆರೋಗ್ಯ ಇಲಾಖೆ ಅಧಿಕಾರಿಗಳೆಲ್ಲಿ?

ಉಡುಪಿ ಜನತೆ ನಿಜಕ್ಕೂ ಆತಂಕ ಪಡಲೇಬೇಕಾದ ಸುದ್ದಿಯಿದು. ಹೋಲ್ ಸೇಲ್ ಹೆಸರಲ್ಲಿ ಕಳಪೆ ಮೊಟ್ಟೆಗಳನ್ನು ವಿತರಿಸುವ ಜಾಲವೊಂದು ಹಲವು ವರ್ಷಗಳಿಂದ ಆಕ್ಟಿವ್ ಆಗಿದೆ. ನಿಸಾರ್ ಎಂಬ ವ್ಯಕ್ತಿ ಎಲ್ಲಾ ಶಾಲೆಗಳಿಗೆ ಮೊಟ್ಟೆ ವಿತರಿಸುವ ಟೆಂಡ‌ರ್ ಪಡೆದುಕೊಂಡಿದ್ದು ಕಳಪೆ ಮೊಟ್ಟೆಗಳನ್ನು ವಿತರಿಸುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ವಳಕಾಡು ಶಾಲೆಯ ಶಿಕ್ಷಕಿಯೊಬ್ಬರಿಗೆ ಮೊಟ್ಟೆ ಸರಿಯಾಗಿ ಬೇಯದಿರುವುದು ಗೊತ್ತಾಗಿತ್ತು. ಈಗ ನಗರದ ಬೋರ್ಡ್‌ ಹೈಸ್ಕೂಲ್ ನಲ್ಲಿ ಹಾಳಾದ ಮೊಟ್ಟೆ ಮಕ್ಕಳಿಗೆ ವಿತರಿಸಲಾಗಿದೆ. .

ನಿಸಾರ್ ವಿತರಿಸುವ ಮೊಟ್ಟೆಯನ್ನೇ ಮಕ್ಕಳಿಗೆ ಬೇಯಿಸಿ ನೀಡಲಾಗುತ್ತಿದೆ. ಬೇಯಿಸಿದ ಮೊಟ್ಟೆಯಲ್ಲಿ ಕೆಟ್ಟ ವಾಸನೆ, ರಬ್ಬರ್ ರೀತಿಯ ಅನುಭವ ಹೀಗೆ ಮೊಟ್ಟೆ ಹಾಳಾದ ಅನುಭವ ಮಕ್ಕಳಿಗೆ ಆಗಿದೆ. ಶಾಲೆಗೆ ವಿತರಿಸುವ ಬೇಳೆಯಲ್ಲೂ ಕಸ ಪತ್ತೆಯಾಗಿದೆ. ಅಕ್ಕಿಯೂ ಕಳಪೆ ಗುಣಮಟ್ಟದ್ದು ಎಂದು ಪೋಷಕರು ಆರೋಪಿಸಿದ್ದಾರೆ. ಒಟ್ಟಾರೆ ಸರ್ಕಾರಿ ಶಾಲೆಯ ಮಕ್ಕಳಿಯೆ ಕಳಪೆ ಗುಣಮಟ್ಟದ ಮೊಟ್ಟೆ, ಬೇಳೆ ಸಿಗುತ್ತಿದ್ದು ಆರೋಗ್ಯ ಇಲಾಖೆ ಅಧಿಕಾರಿಗಳು ಎಲ್ಲಿದ್ದಾರೆ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಸರ್ಕಾರಿ ಸಂಬಳ ಎಣಿಸುವುದನ್ನು ಬಿಟ್ಟು ಫೀಲ್ಡಿಗಿಳಿದು ಕೆಲಸ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಅಧಿಕಾರಿಗಳು,ಜಿಲ್ಲಾಡಳಿತ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕಿದೆ…

About The Author

Leave a Reply

Your email address will not be published. Required fields are marked *