
ಬೈಂದೂರು: ‘ ನಾಡದೋಣಿ ಬದಕು ಸಮುದ್ರಕ್ಕಿಳಿದರೆ ನಿತ್ಯವೂ ಬರಿಗೈಯಲ್ಲೇ -ಮರಳಬೇಕಾಗಿದೆ. ದೋಣಿಗಳನ್ನು ದಡಕ್ಕೆ ಸೇರಿಸಿ, ಮನೆಯಲ್ಲೇ ಕುಳಿತಿದ್ದೇವೆ’ ಎನ್ನುತ್ತ ಕೆಲಹೊತ್ತು ಮೌನಕ್ಕೆ ಜಾರಿದರು -ಉಡುಪಿ ಜಿಲ್ಲೆ ಬೈಂದೂರು ಕುಂದಾಪುರ ತಾಲ್ಲೂಕಿನ
‘ನಾಡದೋಣಿ ಮೀನುಗಾರರು ಒಂದು ಹೊತ್ತಿನ ದುಡಿಮೆಯೂ ಕಷ್ಟಪಡಬೇಕಾಗಿದೆ. ಪಾರಂಪರಿಕವಾಗಿ ಮೀನುಗಾರಿಕೆ ನಡೆಸಿಕೊಂಡು ಬಂದಿದ್ದ ನೂರಾರು ಕುಟುಂಬಗಳು ಈಗ ದೋಣಿ ಮಾರುವ ಸ್ಥಿತಿಗೆ ತಲುಪಿವೆ. ನಾಡದೋಣಿ, ಪಾತಿದೋಣಿಗಳ ನಡೆಸುವ ಮಾಲೀಕರಾಗಿದ್ದವರು ಯಾಂತ್ರೀಕೃತ ಬೋಟುಗಳಲ್ಲಿ ಕಾರ್ಮಿಕರಾ–ಗಿದ್ದಾರೆ’
ರಾಜ್ಯದ ಕರಾವಳಿ ಪ್ರದೇಶದ ಯಾವುದೇ ನಾಡದೋಣಿ -ಮೀನುಗಾರರನ್ನು ಮಾತನಾಡಿಸಿದರೂ, ಅವರು ಹೇಳುವುದು ‘ನಮಗೆ ಮೀನು ಸಿಗುತ್ತಿಲ್ಲ; ಸಿಕ್ಕರೂ ಅಲ್ಪ’, ಏಕೆ ಎಂದು ಕೇಳಿದರೆ ಅವರು ಬೆಟ್ಟು ಮಾಡುವುದು ಬುಲ್ಟ್ರಾಲಿಂಗ್ ಮತ್ತು ಲೈಟ್ -ಫಿಶಿಂಗ್ ನಡೆಸುವ ಟ್ರಾಲ್ ಮತ್ತು ಪರ್ಸಿನ್ ಬೋಟ್ಗಳವರತ್ನ!
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು 320 ಕಿ.ಮೀ. ಕರಾವಳಿ ಪ್ರದೇಶ ಹೊಂದಿವೆ. ಈ ಜಿಲ್ಲೆಗಳ ಕರಾವಳಿ ಭಾಗದಲ್ಲಿ ನಾಡದೋಣಿ ಅವಲಂಬಿಸಿರುವ ಮೀನುಗಾರರ ಕುಟುಂಬಗಳ ಸಂಖ್ಯೆ ದೊಡ್ಡದಿದೆ. ಅವುಗಳ ಪೈಕಿ ಬಹುತೇಕ
ಕುಟುಂಬಗಳು ಅರ್ಥಿಕವಾಗಿ ಇಂದಿಗೂ ದುರ್ಬಲವಾಗಿವೆ. ಮಕ್ಕಳ ಶಿಕ್ಷಣಕ್ಕೆ, ಆರೋಗ್ಯ ಚಿಕಿತ್ಸೆಗೆ ವೆಚ್ಚ ಹೊಂದಿಸಲು ಪರದಾಡಬೇಕಾಗಿದೆ.
‘ಪ್ರತಿ ವರ್ಷ ಜೂನ್ 1ರಿಂದ ಜುಲೈ 31ರವರೆಗೆ ಎರಡು ತಿಂಗಳು, ಅರಬ್ಬಿ ಸಮುದ್ರದಲ್ಲಿ ಆಳಸಮುದ್ರ ಮೀನುಗಾರಿಕೆಯನ್ನು ನಿಷೇಧಿಸಲಾಗುತ್ತದೆ. ಇದು ಮೀನುಗಳ ಸಂತಾನ ಅಭಿವೃದ್ಧಿಯ ಸಮಯ ಮತ್ತು ಈ ಅವಧಿಯಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿರುತ್ತದೆ ಎಂಬ ಕಾರಣಕ್ಕೆ ಆಳಸಮುದ್ರ ಮೀನುಗಾರಿಕೆ ನಿಷೇಧಿಸಲಾಗುತ್ತದೆ. . ಮಳೆಗಾಲದ ಈ ಎರಡು ತಿಂಗಳು ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ನಾಡದೋಣಿ-ಯವರಿಗೆ ಮಾತ್ರ ಅವಕಾಶ ಇರುತ್ತದೆ. ಆದರೆ, ಚಂಡಮಾರುತ, ಸಮುದ್ರ ಪ್ರಕ್ಷುಬ್ಧಗೊಳ್ಳುವುದು. ವಿಪರೀತ ಮಳೆ ಮತ್ತಿತರ ಕಾರಣಗಳಿಂದ ಮೀನುಗಾರಿಕೆಗೆ ಸಿಗುವ ಅವಕಾಶ ಒಂದು ತಿಂಗಳಿಗಿಂತಲೂ ಕಡಿಮೆ’ ಎಂದು ಬಹುಪಾಲು ಮೀನುಗಾರರು ಹಿಂದಿನ ವರ್ಷಗಳ ಲೆಕ್ಕ ಒಪ್ಪಿಸುತ್ತಾರೆ.
‘ನಾಡದೋಣಿ ಮೀನುಗಾರಿಕೆಗೆಯಲ್ಲಿ ನಿರೀಕ್ಷಿಸಿದಷ್ಟು ಮೀನು ಸಿಗದೆ ಯಾವುದೋ ಕಾಲವಾಯಿತು. ಯಾಂತ್ರೀಕೃತ ಬೋಟ್ಗಳ ಅವೈಜ್ಞಾನಿಕ ಮೀನುಗಾರಿಕೆಯು ಮೀನು ಕೊರತೆ ಸಮಸ್ಯೆ ಸೃಷ್ಟಿಸಿದೆ. ಕಡಲತೀರದಿಂದ ಐದು ನಾಟಕಲ್ ಮೈಲಿ ದೂರದವರೆಗೂ ನಮಗೆ ಮೀನು ಸರಿಯಾಗಿ ಸಿಗುತ್ತಿಲ್ಲ’ ಎನ್ನುತ್ತಾರೆ ,
‘ಪ್ರಾಕೃತಿಕ ವಿಕೋಪದಿಂದ ಮತ್ತ್ವ ಕ್ಷಾಮ ತಲೆದೋರಿಲ್ಲ. ದೊಡ್ಡಬೋಟ್ನವರು ಅತಿ ಆಸೆಯಿಂದಾಗಿ ಬುಲ್ಟ್ರಾಲಿಂಗ್, ಲೈಟ್ ಫಿಶಿಂಗ್ನಂತಹ ಅವೈಜ್ಞಾನಿಕ ರೀತಿಯ ಮೀನುಗಾರಿಕೆ ನಡೆಸುವುದರಿಂದ ಮೀನುಗಳ ಸಂತತಿಯೇ ನಾಶವಾಗಿ ಮೀನಿನ ಬರ ತಲೆದೋರಿದೆ’ ಅವರು ಹೇಳುವ ಮಾತು. ಇದು ಬಹುತೇಕ ನಾಡದೋಣಿ ಮೀನುಗಾರರ ಆಕ್ರೋಶದ ಮಾತು ಸಹ. ಸಾಂಪ್ರದಾಯಿಕ ನಾಡದೋಣಿ ಮೀನುಗಾರರು
ಹಿಂದೆ ತ್ರಾಸಿ ಕಡಲ ತೀರದಲ್ಲಿ ಪ್ರತಿಭಟನೆ ನಡೆಸಿ, ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಎರಡು ವರ್ಷಗಳ ಹಿಂದೆ ಕಾರವಾರ-ದಲ್ಲಿಯೂ ಮೀನುಗಾರರು ದೊಡ್ಡಮಟ್ಟದ ಪ್ರತಿಭಟನೆ ನಡೆಸಿದ್ದರು.
ಹಲವು ವರ್ಷಗಳಿಂದ ಕೆಲ ದೊಡ್ಡ ಬೋಟ್ನವರು ಅವೈಜ್ಞಾನಿಕ ರೀತಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದರೂ ಮೀನುಗಾರಿಕೆ ಇಲಾಖೆಯವರು ಅವರ ವಿರುದ್ಧ ಕ್ರಮ ಕೈಗೊಳ್ಳು-ತ್ತಿಲ್ಲ. ಲೈಟ್ ಫಿಶಿಂಗ್ ಹಾಗೂ ಬುಲ್ಟ್ರಾಲಿಂಗ್ ಪದ್ದತಿಗೆ ನಮ್ಮಲ್ಲಿ ನಿಷೇಧ ಇದೆ. ಆದರೂ. ಅದು ನಡೆಯುತ್ತಲೇ ಇದೆ. ಮೀನುಗಾರಿಕೆ ಇಲಾಖೆಯವರು ಕ್ರಮ ತೆಗೆದುಕೊಳ್ಳದೆ ಕಣ್ಮುಚ್ಚಿ ಕುಳಿತಿದ್ದಾರೆ. ಕಾರಣ ಅವರಿಗೆ ಟೇಬಲ್ ಕೆಳಗೆ ಬರುತ್ತದೆ,ಕರಾವಳಿಯಲ್ಲಿ ಅಂದಾಜು ಒಂದು ಲಕ್ಷ ಕುಟುಂಬಗಳು ನಾಡದೋಣಿ ಮೀನುಗಾರಿಕೆಯನ್ನೇ ನಂಬಿವೆ. ಅಂದಾಜು 50 ಸಾವಿರ ಕುಟುಂಬಗಳು ಪರೋಕ್ಷವಾಗಿ ಅವಲಂಬಿತವಾಗಿವೆ. ಅಕ್ರಮ ಮೀನುಗಾರಿಕೆಯು ಇವರೆಲ್ಲರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ನಾಡದೋಣಿ ಮೀನುಗಾರರು ಆಪಾದಿಸುತ್ತಾರೆ.
ಎರಡು ಬೋಟ್ಗಳನ್ನು ಪರಸ್ಪರ ನಿರ್ದಿಷ್ಟ ದೂರದಲ್ಲಿರಿಸಿ ಬೋಟ್ಗಳಿಗೆ 150 ಮೀಟರ್ಗೂ ದೊಡ್ಡಬಲೆ ಕಟ್ಟಿ ಸಮುದ್ರ-ದಾಳದಿಂದ ಮೀನನ್ನು ಹಿಡಿಯುವ ವಿಧಾನಕ್ಕೆ ‘ಬುಲ್ ಟ್ರಾಲಿಂಗ್ ಫಿಶಿಂಗ್’ ಎನ್ನುತ್ತಾರೆ. ಸಣ್ಣ ಕಣ್ಣಿನ ಬಲೆ ಬಳಸುವುದರಿಂದ ಮರಿ ಮೀನುಗಳು ಸಹ ಬಲೆಗೆ ಸಿಲುಕಿ ಸಾಯುತ್ತವೆ. ಲೈಟ್ ಫಿಶಿಂಗ್ನಲ್ಲಿ ಪ್ರಖರವಾದ ಬೆಳಕನ್ನು ಸಮುದ್ರಕ್ಕೆ ಹಾಯಿಸಲಾ-ಗುತ್ತದೆ. ಬೆಳಕಿಗೆ ಆಕರ್ಷಿತಗೊಂಡು ಮೀನು ಬರುತ್ತವೆ. ದೊಡ್ಡ
ಬಲೆ ಬಳಸಿ ಅವುಗಳನ್ನು ಹಿಡಿಯುತ್ತಾರೆ. ಎರಡೂ ವಿಧಾನಗಳಲ್ಲಿ ಮೀನಿನ ಮರಿಗಳನ್ನು ಹಿಡಿಯುವುದರಿಂದಲೂ ಮೀನಿನ ಸಂತತಿ . ಕಡಿಮೆಯಾಗುತ್ತಿದೆ. ಲೈಟ್ ಫಿಶಿಂಗ್ಗಾಗಿ ಜನರೇಟರ್ಗಳನ್ನು ಬೋಟ್ಗಳಲ್ಲಿ ಕೊಂಡು ಹೋದರೂ ಯಾರೂ ಪರಿಶೀಲಿಸು ವವರೇ ಇಲ್ಲದಾಗಿದೆ. ಇಂದು ದೊಡ್ಡ ಯಾಂತ್ರಿಕ ಬೋಟ್ಗಳು ಮೀನುಗಾರರಿಗಿಂತ ಉದ್ಯಮಿಗಳ ಕೈಯಲ್ಲಿವೆ ಎನ್ನುತ್ತಾರೆ ನಾಡದೋಣಿ ಮೀನುಗಾರರು.ಇವರು ಸರ್ಕಾರಕ್ಕೆ ತೆರಿಗೆ ವಂಚಿಸಿ ಮೀನುಗಾರಿಕೆ ಬೋಟ್ ಮಾಡುತ್ತಾರೆ, ಆದರೆ ಹುಟ್ಟು ಮೀನುಗಾರರಿಗೆ ಬದುಕಿಲ್ಲ,
‘ರಾಜ್ಯದ ಕರಾವಳಿಯಲ್ಲಿ ಒಟ್ಟಾರೆ ಮೀನು ವಹಿವಾಟು ವಾರ್ಷಿಕ ₹10 ಸಾವಿರ ಕೋಟಿಗೂ ಮಿಕ್ಕಿದೆ. ರಫ್ತು ಸಹ ಆಗುತ್ತದೆ. ಹೇಗಾದರೂ ಹಿಡಿದು ತರಲಿ, ರಜ್ಜಿಗೆ ಮೀನು ಸಿಕ್ಕರೆ ಸಾಕು ಎಂಬಂತಹ ಸ್ಥಿತಿ ಸರ್ಕಾರಗಳದ್ದು. ಮೀನು ಸಂತತಿ ವೃದ್ಧಿಗೆ ಸಮುದ್ರದಲ್ಲಿ ಕೃತಕ ಬಂಡೆ ಹಾಕುವ ಯೋಜನೆ ಜಾರಿ ಬಿಟ್ಟರೆ ನಾಡದೋಣಿ ಮೀನುಗಾರರ ಈ ಸಮಸ್ಯೆ ಪರಿಹಾರಕ್ಕೆ ಪರಿಣಾಮಕಾರಿಯಾದ ಕೆಲಸ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಆಗಿಲ್ಲ.
‘ಪ್ರತಿವರ್ಷ ಮಳೆಗಾಲದಲ್ಲಿ ಮೀನುಗಾರಿಕೆಗೆ ಇಳಿಯುವ ಮೊದಲು ಬಲೆಗಳ ರಿಪೇರಿ, ಸಲಕರಣೆಗಳ ಖರೀದಿಗೆ ದೊಡ್ಡ ಮೊತ್ತ ವಿನಿಯೋಗಿಸುತ್ತೇವೆ. ತೆರಳುವುದಕ್ಕೂ ಮೊದಲು ಕೆಲಸದವರಿಗೆ ಮುಂಗಡ ಹಣ ನೀಡಬೇಕು. ಅದಕ್ಕಾಗಿ ನಾವು ಸೊಸೈಟಿಗಳಿಂದ ಸಾಲ ಪಡೆಯುತ್ತೇವೆ. ಮೀನುಗಾರಿಕೆ ಉತ್ತಮವಾಗಿ ನಡೆದರೆ
ಸುಲಭವಾಗಿ ಸಾಲ ತೀರಿಸಬಹುದು. ಈ ವರ್ಷ ನವೆಂಬರ್ ನಂತರ ಮೀನು ಸಿಗುತ್ತಿಲ್ಲ. ಸಾಲ ತೀರಿಸಲಾಗದೆ ಸಂಕಷ್ಟದಲ್ಲಿದ್ದೇವೆ’ ಎನ್ನುತ್ತಾರೆ ಉಪ್ಪುಂದದ ನಾಡ ದೋಣಿ ಮೀನುಗಾರ ಜನಾರ್ದನ,.
ಬುಲ್ ಟ್ರಾಲಿಂಗ್ ಮತ್ತು ಲೈಟ್ ಫಿಶಿಂಗ್ ಹಾವಳಿ ಆರಂಭವಾದ ನಂತರ ನಮಗೆ ಮೀನು ಲಭ್ಯತೆಯಲ್ಲಿ ಶೇ 75ರಷ್ಟು ಕಡಿಮೆಯಾಗಿದೆ. ಇತ್ತೀಚಿನ ವರ್ಷಗಳಲ್ಲಂತೂ ಈ ಹಾವಳಿ ಹೆಚ್ಚಿದೆ. ಎರಡು ಬೋಟ್ಗಳಿಗೆ ಬಲೆ ಕಟ್ಟಿ ಕಿಲೋ ಮೀಟರ್ಗಟ್ಟಲೆ ಎಳೆದುಕೊಂಡು ಹೋಗಿ ಮೀನು ಹಿಡಿಯುತ್ತಾರೆ. ಲೈಟ್ ಫಿಶಿಂಗ್ನಲ್ಲಿ ಒಂದು ಕಿ.ಮೀ. ದೂರದ ವರೆಗೂ ಪ್ರಖರ ಬೆಳಕು ಹಾಯಿಸಲಾಗುತ್ತದೆ. ಬೆಳಕಿನತ್ತ ಆಕರ್ಷಿತವಾಗಿ ಎಲ್ಲ ಮೀನುಗಳು ಹೋಗುತ್ತವೆ. ಆಗ ಮೀನಿಗೆ ಬಲೆ ಹಾಕಿ ಹಿಡಿಯುತ್ತಾರೆ. ಹೀಗಾಗಿ ಮೀನುಗಳು ದಡಕ್ಕೆ ಬರುತ್ತಿಲ್ಲ. ನಾವು ಹೆಚ್ಚೆಂದರೆ 8 ರಿಂದ 10 ನಾಟಕಲ್ ಮೈಲಿ ದೂರದ ವರೆಗೆ ಮಾತ್ರ ಸಾಗಬಹುದು. ಕೇರಳದಲ್ಲಿ ಇಂತಹ ಕೆಟ್ಟ ವಹಿವಾಟಿಗೆ ಕಡಿವಾಣ ಹಾಕಲಾಗಿದೆ. ನಿಯಮ ಉಲ್ಲಂಘಿಸಿ ಹೀಗೆ ಮೀನುಗಾರಿಕೆ ಮಾಡುವವರಿಗೆ ಅಲ್ಲಿ ದೊಡ್ಡಮೊತ್ತದ ದಂಡ ವಿಧಿಸಲಾಗುತ್ತಿ ದೆ. ನಮ್ಮ ರಾಜ್ಯದಲ್ಲಿ ಮಾತ್ರ ಏನೂ ನಡೆದಿಲ್ಲ ಎಂಬಂತೆ ಎಲ್ಲರೂ ಮೌನವಾಗಿದ್ದಾರೆ’
ನಾಡದೋಣಿ ಮೀನುಗಾರರ ಸಮಸ್ಯೆಯು ಸ್ವಾವಲಂಬಿಯಾಗಿ ದುಡಿಯುವ ಮೀನುಗಾರ ಮಹಿಳೆಯರ ಮೇಲೂ ಪರಿಣಾಮ ಬೀರಿದೆ. ನಾಡದೋಣಿಗಳು ಕಡಲಿಗಿಳಿಯುವುದೇ ಅಪರೂಪವಾದ ಕಾರಣ ಈ ಮಹಿಳೆಯರು ಹೆಚ್ಚಿನ ದರ ನೀಡಿ ಯಾಂತ್ರಿಕ ಬೋಟ್ನವರಿಂದ ಮೀನುಗಳನ್ನು ಖರೀದಿಸಿ ಮಾರಾಟ ಮಾಡಬೇಕಾದ ಅನಿವಾರ್ಯತೆಯೂ ಎದುರಾಗಿದೆ.
ನಾಡದೋಣಿಯವರ ಹತ್ತಿರ ಮೀನು ಖರೀದಿಸಿ ಮಾರಾಟ ಮಾಡುತ್ತಿದ್ದೆ. ನಮ್ಮೂರ ಬಳಿಯೇ ಮೀನು ಸಿಗುತ್ತಿತ್ತು. ಮೇಲಾಗಿ ವರ್ತಕರಿಗೆ ಕೊಡುವುದಕ್ಕಿಂತ ಕಡಿಮೆ ದರದಲ್ಲಿ ನಾಡದೋಣಿಯವರು ನಮಗೆ ಮೀನು ಕೊಡುತ್ತಾರೆ. ಆದರೆ, ಈಗ ಅವರಿಗೇ ಸರಿಯಾಗಿ ಮೀನು ಸಿಗುತ್ತಿಲ್ಲ. . ಹಿಂದೆ ದಿನಕ್ಕೆ ₹500ರಿಂದ ₹600 ಸಂಪಾದನೆಯಾಗುತ್ತಿತ್ತು. ಈಗ ಅದರ ಅರ್ಧದಷ್ಟೂ ಸಂಪಾದನೆ ಇಲ್ಲ’ . ‘ಬಹುತೇಕ ಮಹಿಳೆಯರು ಮೀನುಮಾರಿ ಕುಟುಂಬ ನಿರ್ವಹಿಸು-ತ್ತಿದ್ದೇವೆ. ಒಂದೆಡೆ ಆದಾಯ ಕಡಿಮೆಯಾಗಿದ್ದರೆ, ಇನ್ನೊಂದೆಡೆ ಬೆಲೆ ಏರಿಕೆಯ ಬಿಸಿ, ಮಕ್ಕಳ ಶಿಕ್ಷಣಕ್ಕೆ ಹಣಹೊಂದಿಸುವುದೂ ಕಷ್ಟವಾಗಿದೆ’ ಎಂದು ಇನ್ನೊಬ್ಬ ಮಹಿಳೆ ಕಣ್ಣೀರಾದರು.
‘ನಾಡದೋಣಿಯಲ್ಲಿ 30 ಜನ ಮೀನುಗಾರಿಕೆಗೆ ತೆರಳುತ್ತೇವೆ. ಅವರ ಕೂಲಿ, ಸೀಮೆ ಎಣ್ಣೆ ವೆಚ್ಚ ನಿಭಾಯಿಸಲೂ ಆಗುತ್ತಿಲ್ಲ. ಮಕ್ಕಳ ಶಿಕ್ಷಣಕ್ಕೆ ಸಾಲ ಮಾಡಿದ್ದೇನೆ. ಆದನ್ನು ತೀರಿಸುವುದು ಹೇಗೆ ಎಂಬ ಚಿಂತೆ’ ಎಂದು ಮೀನುಗಾರರೊಬ್ಬರು ಹೇಳಿಕೊಂಡರು ಬೇರೆ ಬೇರೆ ರಾಜ್ಯಗಳಲ್ಲಿ ಮೀನುಗಾರರಿಗೆ ಸಿಗುವ ಸೌಲಭ್ಯ ಈ ರಾಜ್ಯದ ಲ್ಲಿ ಇಲ್ಲ ಉಡುಪಿ ಜಿಲ್ಲೆಯ ಲ್ಲಿ ಐದು ಶಾಸಕರು ಸಚಿವರು ಇದ್ದಾರೆ. ಎನೂ ಪ್ರಯೋಜ ಇಲ್ಲಾ, ಸೀಮೆ ಎಣ್ಣೆ ರಾಜ್ಯದಿಂದ ಸಿಕ್ಕಿದರೂ ಹಣ ದುಬ್ಬರ, ಕೇಂದ್ರ ಸರ್ಕಾರ ಸಬ್ಸಿಡಿ ದರದಲ್ಲಿ ಎಣ್ಣೆ ಸಿಗಲ್ಲ ಒಟ್ಟಾರೇ ಸರ್ಕಾರ ಇದ್ದು ಇಲ್ಲಾಂದಾಗಿದೆ, ಫಿಶ್ ಮಿಲ್ ಗಳು ಸರಿಯಾದ ದರ ನಿಗದಿ ಇಲ್ಲಾ,
ಕೇರಳ ಸರ್ಕಾರವು ಮಿನುಗಾರರಿಗೆ ಬಲೆ, ಸೀಮೆ ಎಣ್ಣೆ ಖರೀದಿಗೆ ಸಹಾಯಧನ ನೀಡುತ್ತಿದೆ. ಮೀನುಗಾರರಿಗೆ ಮನೆ ನಿರ್ಮಾಣಕ್ಕೆ ಅವರ ಮಕ್ಕಳ ಶಿಕ್ಷಣಕ್ಕೂ ಯೋಜನೆಗಳನ್ನು ಜಾರಿಗೊಳಿಸಿದೆ. ನಮ್ಮ ರಾಜ್ಯದಲ್ಲೂ ಅಂತಹ ಯೋಜನೆಗಳು ಇನ್ನು ಜಾರಿಯಾಗಿಲ್ಲ,ಕಾರಣ ಕರಾವಳಿಯ ರಾಜಕಾರಣಿಗಳಿಗೆ ಈ ಎನ್ನುತ್ತಾರೆ ನಾಡದೋಣಿ ಮೀನುಗಾರರು.












Leave a Reply