
ಬ್ರಹ್ಮಾವರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ಸಂಘಟನೆಯ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ “ರಾಮನಗರ ನ್ಯೂಸ್’ ಕನ್ನಡ ದಿನಪತ್ರಿಕೆಯ ಸಬ್-ಎಡಿಟರ್ ಡೈನಮಿಕ್ ಪತ್ರಕರ್ತೆ ಆರತಿ ಗಿಳಿಯಾರ್ ಅವರು ನೇಮಕಗೊಂಡಿದ್ದಾರೆ.
ಸಂಘಟನೆಯ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ್ ಬಂಗ್ಲೆ ಅವರು ಈ ಆಯ್ಕೆಯ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.
ಹಿರಿಯ ಪತ್ರಕರ್ತೆ ಆರತಿ ಗಿಳಿಯಾರ್ ಅವರ ಆಯ್ಕೆಯಿಂದ ಸಂಘಟನೆಗೆ ಮತ್ತಷ್ಟು ಬಲ ಬಂದಿದೆ ಎಂದು ಉಡುಪಿ ಜಿಲ್ಲಾಧ್ಯಕ್ಷರಾದ ದಾಮೋದರ ಮೊಗವೀರ ನಾಯಕವಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ “ರಾಮನಗರ ನ್ಯೂಸ್’ ಕನ್ನಡ ದಿನಪತ್ರಿಕೆಯ ಸಬ್-ಎಡಿಟರ್ ಡೈನಮಿಕ್ ಪತ್ರಕರ್ತೆ ಆರತಿ ಗಿಳಿಯಾರ್ ಅವರು ನೇಮಕಗೊಂಡಿದ್ದಾರೆ.
ಬ್ರಹ್ಮಾವರ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಆರತಿ ಗಿಳಿಯಾರ್ ಅವರಿಗೆ ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳ ಪದಾಧಿಕಾರಿಗಳು ಹಾಗೂ ಪತ್ರಕರ್ತ ಮಿತ್ರರು – ಶುಭಹಾರೈಸಿ ಅಭಿನಂದನೆ ಸಲ್ಲಿಸಿದ್ದಾರೆ.















Leave a Reply