
ಪಾರ್ಶ್ವವಾಯು ಪೀಡಿತ ಕೇರಳ ಮೂಲದ ಮೂವಟ್ಕಪುಳದ ರಾಯೇಲ್ ಪೌಲ್ (48) ಅಸಹಾಯಕರಾದ ಇವರಿಗೆ ಜಿಲ್ಲಾಡಳಿತ ಸ್ಪಂದನೆ ಹಾಗೂ ಆಶ್ರಯ ನೀಡಬೇಕೆಂದು ಮೂರು ತಿಂಗಳ ಹಿಂದೆ ರೋಗಿಯನ್ನು ಆಂಬ್ಯುಲೆನ್ಸ್ ನಲ್ಲಿ ಪತ್ರಿಕಾಗೋಷ್ಠಿಗೆ ಕರೆತಂದು ಜಿಲ್ಲಾಡಳತದ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಡಾ. ಭಾರ್ಗವಿ ಐತಾಳ್ ದಂಪತಿ ಕಳೆದ ಮೂರು ತಿಂಗಳಿನಿಂದ ರೋಗಿಯನ್ನು ಶುಶೂಷೆ ನಡೆಸಿ ಸಲಹುತ್ತಿದ್ದಾರೆ. ರೋಗಿ ತನಗೆ ಊರಿಗೆ ಹೋಗಬೇಕು ತನ್ನವರೊಂದಿಗೆ ಬಾಳಬೇಕು ಎಂದು ಕಣ್ಣಿರು ಹಾಕುತ್ತಿದ್ದಾರೆ.
ಸಂಬಂಧಪಟ್ಟ ಇಲಾಖೆಗೆ ಆಶ್ರಯ ನೀಡಲು ಸಾದ್ಯವಾಗಲಿಲ್ಲ. ಕೊನೆಯ ಪಕ್ಷ ಆಧಾರ್ ಕಾರ್ಡ್ ಆಧಾರದಲ್ಲಿಯಾದರೂ ಸಂಬಂಧಿಕರ ಪತ್ತೆ ಮಾಡಿ ಸಹಕರಿಸಲಿ. ಇಲ್ಲವಾದಲ್ಲಿ ಮಾನವೀಯ ನೆಲೆಯಲ್ಲಿ ಸ್ವಾತಂತ್ರ್ಯ ಉತ್ಸವದ ಈ ಸಂದರ್ಭ ರೋಗಿಗೆ ಸ್ಪಂದಿಸುವ ಮುಖಾಂತರ ನಮ್ಮ ಸಂವಿಧಾನವನ್ನು ಗೌರವಿಸಲಿ.
ಆಶ್ರಯ ನೀಡಿದ ಹೆಬ್ರಿಯ ಡಾ.ಭಾರ್ಗವಿ ಐತಾಳ್ ದಂಪತಿಯರ ನೆರವು ಮರೆಯುವಂತಿಲ್ಲ. ಅಧಿಕಾರಿಗಳ ಗಮನಕ್ಕೆ ತಂದರೂ ಜಾಣ ಕಿವುಡು ತೋರಿಸಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಸಂವಿಧಾನದ ಹಕ್ಕನ್ನು ಕಿತ್ತುಕೊಂಡರು. ಐತಾಳ್ ದಂಪತಿ ಸಹಕರಿಸದಿದ್ದರೆ ರೋಗಿ ಬೀದಿ ಪಾಲಾಗಬೇಕಾದ ಸಂಭವ. ಪ್ರತಿ ತಿಂಗಳು ರೂ. 30000 ಕ್ಕೂ ಹೆಚ್ಚು ರೋಗಿಗೆ ಖರ್ಚಾಗುತ್ತಿದ್ದು ಐತಾಳ್ ದಂಪತಿಗಳು ಉಚಿತವಾಗಿ ಸೇವೆ ನೀಡುತ್ತಿದ್ದಾರೆ.
ರೋಗಿಯು ನನ್ನನ್ನು ಊರಿಗೆ ತಲುಪಿಸಿ ಇಲ್ಲವಾದರೆ ಬೇರೆ ಕಡೆ ಕರೆದುಕೊಂಡು ಹೋಗಬೇಡಿ ಐತಾಳ್ ದಂಪತಿಯವರ ಆಶ್ರಯವೇ ಬೇಕು ಎಂದು ಕಣ್ಣಿರು ಹಾಕುತ್ತ ನುಡಿಯುತ್ತಾರೆ.















Leave a Reply