Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಪತ್ರಕರ್ತರ ಧ್ವನಿಗೆ ಮತ್ತಷ್ಟು ಬಲ: ನೆಲಮಂಗಲದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ 4ನೇ ರಾಜ್ಯ ಸಮ್ಮೇಳನ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ), ಬೆಂಗಳೂರು ಸಂಘಟನೆಯ 4ನೇ ರಾಜ್ಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಪುಷ್ಪ ಕನ್ವೆನ್ನನ್‌ ಹಾಲ್‌ನಲ್ಲಿ ಆಗಸ್ಟ್‌ 8ರಂದು ಅದ್ದೂರಿಯಾಗಿ ನಡೆಯಿತು.
ಸಮ್ಮೇಳನವನ್ನು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗಡೆ ಅವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನ್ಯಾಯಮೂರ್ತಿ ಸಂತೋಷ್‌ ಹೆಗಡೆ ಅವರು, ಪತ್ರಕರ್ತರ ಧ್ವನಿ ಸಂಘಟನೆ ಕಳೆದ ಐದು ವರ್ಷಗಳಲ್ಲಿ ಪತ್ರಕರ್ತರ ಪರವಾಗಿ ಸಾಕಷ್ಟು ಕೆಲಸ ಮಾಡಿದೆ. ಪತ್ರಕರ್ತರ ಕಷ್ಟ-ಸುಖಗಳಲ್ಲಿ ಸಂಘಟನೆ ಭಾಗಿಯಾಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ
ಮಲ್ಲಿಕಾರ್ಜುನ ಅವರು ತಮ್ಮ ಶಿಷ್ಯರಾಗಿದ್ದು, ಅವರ ಹಿಂದೆ ಸದಾ ತಾನು ನಿಲ್ಲುವುದಾಗಿ ಸಂತೋಷ್ ಹೆಗಡೆ ಅವರು ಭರವಸೆ ನೀಡಿದರು. ರಾಜ್ಯದ 31 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ, ಪತ್ರಕರ್ತರಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯ ತುಂಬುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿದ್ದ ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪತ್ರಕರ್ತರನ್ನು ಗುರುತಿಸಿ ಗೌರವಿಸಲಾಯಿತು. ಈ ಮೂಲಕ ಪತ್ರಕರ್ತರ ಧ್ವನಿಗೆ ಧ್ವನಿಯಾಗಿ, ಅವರ ಹಕ್ಕು ಮತ್ತು ಗೌರವಕ್ಕಾಗಿ ಸಂಘಟನೆ ಸದಾ ಜೊತೆಯಲ್ಲಿದೆ ಎಂಬ ಸಂದೇಶವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಚೆಲುವರಾಯಸ್ವಾಮಿ ಸೇರಿದಂತೆ ಸಚಿವರು, ಶಾಸಕರು, ಜನಪ್ರತಿನಿಧಿಗಳು, ಉದ್ಯಮಿಗಳು, ಮಠಾಧೀಶರು ಹಾಗೂ ಚಲನಚಿತ್ರ ನಟರು ಭಾಗವಹಿಸಿದ್ದರು.

ಅಲ್ಲದೆ ಕರ್ನಾಟಕ ರಕ್ಷಣಾ ವೇದಿಕೆ, ಅಂಬೇಡ್ಕ‌ರ್ ಸೇನೆ, ಜೈ ಕರ್ನಾಟಕ ಸೇರಿದಂತೆ ವಿವಿಧ ಸಂಘಟನೆಗಳ ರಾಜ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು ಸಮ್ಮೇಳನಕ್ಕೆ ಮೆರುಗು ತಂದರು.
ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವುದು, ಪತ್ರಕರ್ತರ ಹಕ್ಕುಗಳಿಗಾಗಿ ಧ್ವನಿ ಎತ್ತುವುದು ಹಾಗೂ ಸಮಾಜದ ಅಂಕುಡೊಂಕುಗಳನ್ನು ಜನರ ಮುಂದಿಡುವ ಪತ್ರಕರ್ತರಿಗೆ ಸಂಘಟನೆಯ ಮೂಲಕ ಮತ್ತಷ್ಟು ಶಕ್ತಿ ತುಂಬುವ ಸಂಕಲ್ಪದೊಂದಿಗೆ 4ನೇ ರಾಜ್ಯ ಸಮ್ಮೇಳನ ಯಶಸ್ವಿಯಾಗಿ ನೆರವೇರಿತು.

About The Author

Leave a Reply

Your email address will not be published. Required fields are marked *