Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಚಿಕಿತ್ಸೆಗೆ ಸ್ಪಂದಿಸಿದ ಒಡಿಸ್ಸಾದ ಮಾನಸಿಕ ಯುವಕ ಸಂಬಂಧಿಕರ ವಶಕ್ಕೆ

ಉಡುಪಿ ಸೆ.1: ಕಳೆದ ಎಂಟು ದಿನಗಳ ಹಿಂದೆ ವಿಶು ಶೆಟ್ಟಿ ಅಂಬಲಪಾಡಿಯವರಿಂದ ರಕ್ಷಿಸಲ್ಪಟ್ಟ ಸಾರ್ವಜನಿಕರ ಮನೆಗಳಿಗೆ ಪ್ರವೇಶಸುತ್ತಿದ್ದ ಮನೋರೋಗಿ ಯುವಕ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಇದೀಗ ಸಂಬಂಧಿಕರ ಪತ್ತೆಯಾಗಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಯುವಕ ಸಾಗರ (24) ಒಡಿಸ್ಸಾ ಮೂಲದವನಾಗಿದ್ದು ಆಕಸ್ಮಿಕ ಮನೋರೋಗಿಯಾಗಿ ಉಡುಪಿಗೆ ಬಂದಿದ್ದು ನಿಟ್ಟೂರಿನ ಮನೆಗಳಿಗೆ ಪ್ರವೇಶಿಸಿ ಭಯದ ವಾತಾವರಣ ಸೃಷ್ಟಿಸಿದ್ದ. ಸ್ಥಳೀಯ ನಗರಸಭಾ ಸದಸ್ಯೆ ಶ್ರೀಮತಿ ಸಂಪಾ ವಿನಂತಿ ಮೇರೆಗೆ ವಿಶು ಶೆಟ್ಟಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.

ಇದೀಗ ಮಾಹಿತಿ ಪಡೆದ ಸಹೋದರ ಹಾಗೂ ಸಂಬಂಧಿಕರು ಉಡುಪಿಗೆ ಬಂದಿದ್ದು ತಮ್ಮ ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ.

About The Author

Leave a Reply

Your email address will not be published. Required fields are marked *