Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಆಶ್ರಯಕ್ಕಾಗಿ ಬಂದ ಮಹಿಳೆಯ ರಕ್ಷಣೆ: ಸೂಚನೆ

ಉಡುಪಿ ಮಾ. 5: ನೊಂದ ಮಹಿಳೆಯೋರ್ವರು ಅಸಹಾಯಕರಾಗಿದ್ದು ಬದುಕಲು ಆಶ್ರಯಕ್ಕಾಗಿ ದುಃಖಿಸುತ್ತಿದ್ದು ಮಾಹಿತಿ ಪಡೆದ ವಿಶು ಶೆಟ್ಟಿ ಮಹಿಳೆಯನ್ನು ರಕ್ಷಿಸಿ ಸಖಿ ಸೆಂಟರ್ ಗೆ ದಾಖಲಿಸಿದ್ದಾರೆ.
ಮಹಿಳೆ ಮೂಲತಃ ತುಮಕೂರಿನ ತಿಪಟೂರಿನವರಾಗಿದ್ದು ಹೆಸರು ಗಂಗಮ್ಮ (48) ಪತಿ ಹಾಗೂ ಮಗ ತೀರಿಕೊಂಡಿದ್ದು ತಾನು ಬೀದಿ ಪಾಲಾಗಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ನೆಲೆಗಾಗಿ ಆಶ್ರಯ ಸಿಗದಿದ್ದರೆ ಬೇರೆ ಉಪಾಯವಿಲ್ಲದೆ ಆತ್ಮಹತ್ಯೆ ಒಂದೇ ದಾರಿ ಎಂದು ದುಃಖಿಸಿದ್ದಾರೆ.
ರಕ್ಷಣಾ ಕಾರ್ಯದಲ್ಲಿ ಶ್ರೀ ಕೃಷ್ಣ ವೃದ್ಧರ ಆಶ್ರಮದ ಮುಖ್ಯಸ್ಥರಾದ ಕೃಷ್ಣಮೂರ್ತಿ ಭಟ್ ಸಹಕರಿಸಿದ್ದಾರೆ.
ಸಂಬಂಧಿಕರು ಸಖಿ ಸೆಂಟರ್ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.

About The Author

Leave a Reply

Your email address will not be published. Required fields are marked *