Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘ(ರಿ) ವಾರ್ಷಿಕ ಮಹಾಸಭೆ

ಬೈಂದೂರು ತಾಲೂಕು ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘದ ವಾರ್ಷಿಕ ಮಹಾಸಭೆ  ಕರ್ನಾಟಕ ಖಾರ್ವಿ ಯಾನೆ ಹರಿಕಾಂತ ಮಹಾಜನ ಸಂಘದಲ್ಲಿ ನಡೆಯಿತು
ಸಂಘದ ಆಯವ್ಯಯ 2024-25-26 ಮಂಡನೆ ಮಾಡಿದರು ಈ ವರ್ಷದ ಲಾಭಾಂಶ 60 ಲಕ್ಷ ಆಗಿರುತ್ತದೆ,ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀನಿವಾಸ ಮಂಡಿಸಿದರು, ಸಭೆ ಯ ನಡುವಳಿಕೆಯನ್ನು ಮಂಜುನಾಥರವರು ವಾಚಿಸಿದರು,ಊರಿನ  ಗಣ್ಯರಿಗೆ ಸಾಧನೆ ಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಿಲಾಯಿತು

ಡಾ ಮನೋಹರ ಉಪ್ಪುಂದ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯ ಪ್ರಾದ್ಯಾಪಕರಾದ ಡಾಕ್ಟರ್ ಮನೋರ ಉಪ್ಪಂದ ರವರು merger of SBI and Acquisition of commercial banks A study with social reference tothe merger of SBI and Associates ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಿ ಎಚ್ ಡಿ ಪಡೆದಿದ್ದು ಅವರು ಡಾಕ್ಟರೇಟ್ ಪದವಿ ಪ್ರಶಸ್ತಿ ಪಡೆದು ಇವತ್ತು ಅವರನ್ನು ಗೌರವಿಸಲಾಯಿತು

ಡಾ ದಿವ್ಯಾ ರಾಜ್ ಖಾರ್ವಿ ಮೂವರು ಪ್ಯಾಶನ್ ಡಿಸೈನ್ ಕ್ಷೇತ್ರದಲ್ಲಿ ನೋಬೆಲ್ ರೆಕಾರ್ಡ್, ಡಿಶ್ ಪ್ಯಾಶನ್ ಸಮಿಟ್ 2026ರಲ್ಲಿ ಪ್ರತಿಷ್ಟಿತ ಗೌರವ ಡಾಕ್ಟರೇಟ್ ಪ್ರಶಸ್ತಿ ಗೆ ಅವರನ್ನು ಗೌರವಿಸಲಾಯಿತು

ಜೀವಿಕಾ ಎಂ ಖಾರ್ವಿ ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಡೆದ 21 ನೇ ರಾಷ್ಟ್ರ ಮಟ್ಟದ AK paper ಕೆಂಗೇರಿಯಲ್ಲಿ ಚಾಂಪಿಯನ್ನಾಗಿ ಆಯ್ಕೆಯಾಗಿದ್ದು ಅವರನ್ನು ಸನ್ಮಾನಿಸಲಾಯಿತು
ಎಸ್ಸೆಸ್ಸೆಲ್ಸಿ ಪರೀಕ್ಷೆ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು
ಪಿಯುಸಿ ವಾಣಿಜ್ಯ ವಿಭಾಗದಲ್ಲಿ
ಅಧ್ಯಕ್ಷರಾದ ನಾಗೇಶ್ ಖಾರ್ವಿ ಅಳಿವೆಕೊಡಿ ಮಾತನಾಡಿ ಸಂಘದಲ್ಲಿ ಹಣ ದುರುಪಯೋಗದ ಬಗ್ಗೆ  ಈಗಾಗಲೇ ತನಿಖೆ ನಡೆಯುತ್ತಿದ್ದು, ಇದರಿಂದ ಹಿಂದೆ ಸರಿಯುವ ಮಾತೆ ಇಲ್ಲ ಈಗಾಗಲೇ ಒಂದು ವರ್ಷದ ಅಡಿಟ್ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಅವರ ಅವಧಿಯ ತನಕ ಸರ್ಕಾರದ ಅಡಿಟ್ ಮಾಡಿಸಲಾಗುವುದು ಎಂದು ಹೇಳಿದರು

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶಂಕರ್ ಎಂ ಖಾರ್ವಿ, ನಾಗೇಶ್ ಖಾರ್ವಿ ಮಡಿಕಲ್, ಮಂಜುನಾಥ ಜಿ ಖಾರ್ವಿ, ಮೋಹನ್ ದಾಸ್ ಖಾರ್ವಿ, ರಾಜೇಂದ್ರ ಖಾರ್ವಿ, ಮಂಜುನಾಥ, ಮಹೇಶ್ ಕೆ ಶ್ರೀಮತಿ ಜ್ಯೋತಿ, ಶ್ರೀಮತಿ ಲಕ್ಷ್ಮಿ, , ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀನಿವಾಸ ಕೆ ಹಾಗೂ ಸಿಬ್ಬಂದಿ ವರ್ಗ  ಮತ್ತು  ಎಲ್ಲಾ ಊರಿನ ಸದಸ್ಯರು ಹಾಜರಿದ್ದರು

About The Author

Leave a Reply

Your email address will not be published. Required fields are marked *