Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಕುಂದಾಪುರ- ಬೈಂದೂರು ತಾ। ನಾಡದೋಣಿ ಮೀನುಗಾರರ ಒಕ್ಕೂಟ ಮೀನುಗಾರರಿಂದ ಸಮುದ್ರಪೂಜೆ, ಮತ್ತ್ವ ಸಮೃದ್ಧಿಗೆ ಪ್ರಾರ್ಥನೆ

ಕುಂದಾಪುರ ಹಾಗೂ ಬೈಂದೂರು ತಾಲೂಕು ನಾಡದೋಣಿ ಮೀನುಗಾರರ ಒಕ್ಕೂಟದಿಂದ ಸಮುದ್ರ ಪೂಜೆ ಬುಧವಾರ ನಡೆಯಿತು.

ಪ್ರತೀ ವರ್ಷದಂತೆ ಮರವಂತೆಯ ಶ್ರೀ ಮಹಾರಾಜ ಸ್ವಾಮಿ ವರಾಹ ದೇವಸ್ಥಾನ, ಶ್ರೀ ಗಂಗಾಧರೇಶ್ವರ ದೇವಸ್ಥಾನ ಹಾಗೂ ಅರಮಲಿಂಗೇಶ್ವರ ದೇವಸ್ಥಾನದಲ್ಲಿ ಮೀನುಗಾರರು ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮೀನುಗಾರರು ಶ್ರೀ ಮಹಾರಾಜ ಸ್ವಾಮಿ ವರಾಹ ದೇವಸ್ಥಾನದ ಎದುರಿನ ಸಮುದ್ರದಲ್ಲಿ ಗಂಗೆ ಪೂಜೆ ನೆರವೇರಿಸಿ, ಮತ್ತ್ವ ಸಮೃದ್ಧಿಗೆ ಪ್ರಾರ್ಥಿಸಿದರು. ಅರ್ಚಕರಾದ ನರಸಿಂಹ ಅಡಿಗ ಅವರು ಪೂಜಾ ವಿಧಿಗಳನ್ನು ನೆರವೇರಿಸಿದರು.

ಮೊದಲಿಗೆ ಕುಂದಾಪುರ ಹಾಗೂ ಬೈಂದೂರುಒಕ್ಕೂಟದವತಿಯಿಂದ ಸಮುದ್ರ ಪೂಜೆ ನಡೆದರೆ, ಬಳಿಕ ಆಯಾಯ ಭಾಗದಲ್ಲಿ ಅಂದರೆ ಗಂಗೊಳ್ಳಿ, ಮರವಂತೆ, ಉಪ್ಪುಂದ, ಕೊಡೇರಿ,  ವಲಯಗಳಲ್ಲಿ ಸಮುದ್ರ ಪುಜೆ ನಡೆಯುತ್ತದೆ. ಆ ಬಳಿಕ ನಾಡದೋಣಿ ಮೀನುಗಾರರು ಕಡಲಿಗೆ ಇಳಿಯಲಿದ್ದಾರೆ. , ಬೈಂದೂರು ಭಾಗದ ಕೋಡಿ, ಗಂಗೊಳ್ಳಿ, , ಕಂಚು ಗೋಡು, ಹೊಸಪೇಟೆ, ಮರವಂತೆ,  ಕೊಡೇರಿ, ಉಪ್ಪುಂದದ ಮಡಿಕಲ್,  ಅಳಿವೆಕೊಡಿ  ನಾಡದೋಣಿ ಸಾವಿರಾರು ಮಂದಿ ಸಾಂಪ್ರದಾಯಿಕ ಮೀನುಗಾರರಿದ್ದಾರೆ.

ಈ ಸಂದರ್ಭದಲ್ಲಿ ಬೈಂದೂರು ವಲಯದ ನಾಡ ದೋಣಿ ಮೀನುಗಾರ ಸಂಘದ ಅಧ್ಯಕ್ಷ  ಬಿ ಎಚ್ ಕೆ ಕುಮಾರ ಖಾರ್ವಿ, ಗಂಗೊಳ್ಳಿ ವಲಯದ ನಾಡ ದೋಣಿ ಮೀನುಗಾರರ ಸಂಘದ ಯಶವಂತ ಖಾರ್ವಿ, ಪ್ರಮುಖರಾದ ನಾಗೇಶ್ ಖಾರ್ವಿ, ಉಮೇಶ ಖಾರ್ವಿ, ಮರವಂತೆ ರಾಮ ಮಂದಿರ ಮಾಜಿ ಅಧ್ಯಕ್ಷ ಸೋಮಯ್ಯ ಖಾರ್ವಿ, ಸುರೇಶ ಖಾರ್ವಿ ಮರವಂತೆ, ಮುಖಂಡರು, ದೇವಸ್ಥಾನದ ಪದಾಧಿಕಾರಿಗಳು, ಪ್ರಮುಖರು, ಅಪಾರ ಸಂಖ್ಯೆಯ ಮೀನುಗಾರರು ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *