July 28, 2026
img-20260727-wa01306885402915724499612.jpg

ಮರವಂತೆ; ದಿನಾಂಕ 25.07.2026ನೇ ಶನಿವಾರ ದಂದು ಶ್ರೀ ರಾಮ ಕರಾವಳಿ ಮೀನುಗಾರರ ವಿವಿದೋದ್ದೇಶ ಸಹಕಾರಿ ಸಂಘ (ನಿ) ಮರವಂತೆಯ 12ನೇ ವಾರ್ಷಿಕ ಮಹಾಸಭೆಯು ಶ್ರೀ ರಾಮ ಮಂದಿರ ಮರವಂತೆಯ ವಠಾರದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಬಿ.ವೆಂಕಟರಮಣ ಖಾರ್ವಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರು ಮಾತನಾಡಿ ಸಂಘದ ಅಭಿವೃದ್ಧಿಗೆ ಸಹಕರಿಸುತ್ತೀರುವ ಎಲ್ಲಾ ಸದಸ್ಯರಿಗೆ ಅಭಿನಂದನೆಯನ್ನ ಸಲ್ಲಿಸಿ, ಸಂಘವು ವರದಿ ವರ್ಷದಲ್ಲಿ ಗಳಿಸಿದ ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡುವುದಾಗಿ ಘೋಷಣೆ ಮಾಡಿದರು. ವಾರ್ಷಿಕ ಮಹಾಸಭೆಯನ್ನು ಜ್ಯೋತಿಯವರ ಪ್ರಾರ್ಥನೆಯೊಂದಿಗೆ ಆರಂಭಿಸಿ, ರಿತೇಶರವರು ಸ್ವಾಗತಿಸಿ, ದಿನಕರರವರು ಸೂಚನಾ ಪತ್ರ ಓದಿ. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಾದ ರಂಜಿತ್‌ರವರು 2025-26ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು. ಮಹೇಶರವರು 2026-27ನೇ ಸಾಲಿನ ಅಂದಾಜು ಆಯವ್ಯಯ ಮಂಡಿಸಿದರು. ನರಸಿಂಹ ರವರು ಅನುಪಾಲನಾ ವರದಿಗೆ ಅನುಮೋದನೆ ಪಡೆದರು. ನಾಗೇಂದ್ರ ರವರು ಮುಂದಿನ ಯೋಜನೆಗಳ ಬಗ್ಗೆ ಅಂಗೀಕಾರದ ಕುರಿತು ಕೇಳಿಕೊಂಡರು. ರೋಹಿತ್‌ರವರು ಧನ್ಯವಾದವನ್ನು ಗೈದು,ನಿರೂಪಣೆಯನ್ನು ಮಹೇಶರವರು ನೆರವೆರಿಸಿದರು.

ಮಾರುಕಟ್ಟೆ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಶ್ರೀ ದಿನಕರ್ ರವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು…

About The Author

Leave a Reply

Your email address will not be published. Required fields are marked *