

ಬೈಂದೂರು,; ಬೈಂದೂರು ತಾಲೂಕು ಪಡುವರಿಯ ಅಳಿವೇ ಕೋಡಿ, ಉಪ್ಪುಂದದಿಂದ ಕೇವಲ ನಾಲ್ಕು ಕಿಲೋಮೀಟರ್ ಅಲ್ಲಿನ ಜನರ ಬದುಕು 70ರ ದಶಕದ ಹಿಂದೆ ಇರುವ ಬದುಕು ಎಂತಾ ಸ್ಥಿತಿ ಯಲ್ಲಿರ ಬಹುದು, ಬುದ್ಧಿವಂತರ ನಾಡು, ಸ್ಥಿತಿ ನೋಡಿದರೆ ಬುದ್ಧಿ ಇಲ್ಲದಂತದಿದೆ,ಚೆಲ್ಲಾಟ ಆಡುತ್ತಿರುವ ರಾಜಕೀಯ ವ್ಯಕ್ತಿಗಳು ಮತ್ತು ಅಧಿಕಾರಿಗಳು ಇತ್ತ ಗಮನ ಇಡಬೇಕಾಗುತ್ತದೆ ವರ್ಷದ 12 ತಿಂಗಳಲ್ಲಿ ಕುಡಿಯುವ ನೀರಿಗಾಗಿ ಕಿಲೋಮೀಟರ್ಗಳಷ್ಟು ಅಲೆದಾಟ


ಮಾಡಬೇಕು ಹಾಗೂ ರೋಡುಗಳ ದುಷ್ಥಿತಿ ನೋಡಿದರೆ ಮಳೆಗಾಲದಲ್ಲಿ ನೀರು ತುಂಬಿಕೊಂಡು ನಡೆದಾಡಲು ಕಷ್ಟ,ಶಾಲಾ ಮಕ್ಕಳ ಪರಿಸ್ಥಿತಿ ಇನ್ನೂಂದು,ಮಳೆಗಾಲದ ಋತುವಿನಲ್ಲಿ



ಸಮುದ್ರದ ನೀರು ಊರು ದಾಟಿ ನದಿಗೆ ಬರುತ್ತದೆ, ಇಂಥ ಪರಿಸ್ಥಿತಿಯಲ್ಲಿ ಅವರ ಮನಸ್ಥಿತಿ ಹೇಗಿರಬಹುದು,ಕೇವಲ ಎರಡು ಕಿಲೋಮೀಟರ್ ಹೊಳೆ ದಾಟಿದರೆ ಬೈಂದೂರು ನಾಡಕಚೇರಿ, ಪೋಲಿಸ್ ಠಾಣೆ ಸಂತೆ ಇನ್ನಿತರ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಹತ್ತಿರವಾಗಿರುತ್ತದೆ ಆದರೆ ಅದಕ್ಕೆ ಸೇತುವೆ ಇಲ್ಲ, ದೋಣಿ ದಾಟಿಯೇ ಹೋಗಬೇಕಾಗುತ್ತದೆ ಶಾಲ ಮಕ್ಕಳು ಕಾಲೇಜಿಗೆ ಹೋಗಬೇಕಾದರೆ ದೋಣಿಯಲ್ಲಿ ಸಾಗಬೇಕು ಬೈಂದೂರು ಪಟ್ಟಣ ಪಂಚಾಯತ್ ಆದರೂ ಅಳವೆಕೊಡಿ ಭಾಗದ ಜನರಿಗೆ ಮುಕ್ತಿ ಸಿಗದಂತಾಗಿದೆ ಇನ್ನಾದರೂ ರಾಜಕೀಯ ವ್ಯಕ್ತಿಗಳು ಎಚ್ಚೆತ್ತುಕೊಂಡು ಆ ಭಾಗದ ಜನರಿಗೆ ಸರ್ಕಾರದ ಸವಲತ್ತುಗಳನ್ನು ಒದಗಿಸಿಕೊಡಬೇಕು ಎಂಬುವುದು ಗ್ರಾಮಸ್ಥರ ಮನವಿ















Leave a Reply